ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಕಪ್ಪ (85) ಅವರು ಆತ್ಮಹತ್ಯೆ (Farmer suicide) ಮಾಡಿಕೊಂಡಿದ್ದಾರೆ. ಸಾಲದ ಭಾದೆಯಿಂದ ನೊಂದಿದ್ದ ಅವರು ಕಳೆ ನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಕಪ್ಪ ಅವರು ಗುರುವಾರ ಸಂಜೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಇಂದು ನಿಧನ ಹೊಂದಿದ್ದಾರೆ.
ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1,15,000 ಬೆಳೆ ಸಾಲ ಮತ್ತು 50,000 ಸಾವಿರ ವೈಯಕ್ತಿಕ ಸಾಲ ಹಾಗೂ ಕೈಗಡ ಸಾಲ ಸಹ 3,50,000 (ಮೂರುವರೆ) ಲಕ್ಷ ರೂ ಸಾಲ ಮಾಡಿದ್ದರು. ಈ ಬಾರಿ ಬೆಳೆ ಸರಿಯಾಗಿ ಬಂದಿರಲಿಲ್ಲ. ಜತೆಗೆ ಬೇಸಿಗೆ ಬಿರುಬಿಸಿಲಿನಿಂದಾಗಿ ತೋಟ ಒಣಗುತ್ತಿದ್ದು ಪಡೆದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಳಲೆ ಸಹಕಾರ ಬ್ಯಾಂಕ್ ನೋಟಿಸಿನಿಂದಾಗಿ ಬೇಸತ್ತು ವಿಷ ಸೇವಿಸಿದ್ದಾರೆಂದು ಮಗ ಪುಟ್ಟಸ್ವಾಮಿ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಚಿಕ್ಕಮಗಳೂರು: ಪೊಲೀಸ್ ಠಾಣೆಯ ಮೇಲೇರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆಯ ಚಾವಣಿ ಮೇಲೆ ಏರಿ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಹಳೇ ಮೂಡಿಗೆರೆ ಗ್ರಾಮದ ಶಿಲ್ಪ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಶಿಲ್ಪ ವಿರುದ್ಧ 2022ರಲ್ಲಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿಲ್ಪ ಮತ್ತು ಅಕ್ಕನ ನಡುವೆ ಗಲಾಟೆ ನಡೆದಿದ್ದು, ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು.
ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಶಿಲ್ಪ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿತ್ತು. ಕೋರ್ಟ್ ಸಮನ್ಸ್ ಹಿಡಿದು ಠಾಣೆಗೆ ಬಂದ ಶಿಲ್ಪ ಇದ್ದಕ್ಕಿದ್ದಂತೆ ಚಾವಣಿ ಏರಿ ಸಾಯಲು ಮುಂದಾಗಿದ್ದಾರೆ. ಕೂಡಲೇ ಮಹಿಳಾ ಪೊಲೀಸರು ಅವರನ್ನು ಹಿಡಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : Karnataka Election 2023: ಜೆಡಿಎಸ್‌ನ ಆಪರೇಷನ್ ಎನ್.ಆರ್. ಸಂತೋಷ್ ಸಕ್ಸಸ್; ದಳದತ್ತ ಮುಖ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ