ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಬೆಟ್ಟದ ತಾವರೆ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದ್ದರಿಂದ (Car Accident) ದಂಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ಶ್ರೀನಿವಾಸ್ ಹಾಗೂ ಶ್ವೇತಾ ಮೃತ ದಂಪತಿ.
ದಂಪತಿ ಮತ್ತು ಮಕ್ಕಳು ಕುಟುಂಬಸ್ಥರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಬೆಂಗಳೂರಿನಿಂದ ಭದ್ರಾವತಿಗೆ ಹೋಗುತ್ತಿದ್ದರು. ತರೀಕೆರೆ ತಾಲೂಕಿನ ಬೆಟ್ಟದ ತಾವರೆ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದು, ಗಾಯಾಳು ಮಕ್ಕಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | ದೆಹಲಿಯ ಸಾಕೇತ್ ಕೋರ್ಟ್ನೊಳಗೆ ಮಹಿಳೆಗೆ ಗುಂಡೇಟು; ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸ್ ಅಧಿಕಾರಿ
ಪಿಯು ಪರೀಕ್ಷೆಯಲ್ಲಿ ಫೇಲ್; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಫೇಲ್ (2nd puc Student fail) ಆಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಮನನೊಂದು (Student suicide) ನೇಣಿಗೆ ಶರಣಾಗಿದ್ದಾಳೆ. ವಿಜಯಲಕ್ಷ್ಮಿ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಗುಂಡ್ಲುಪೇಟೆ ತಾಲೂಕಿನ ಮೂಡಗೂರು ಗ್ರಾಮದ ನಿವಾಸಿ ವಿಜಯಲಕ್ಷ್ಮಿ, ನಗರದ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ಬೆಳಗ್ಗೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೆಎಸ್‌ಎಸ್ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಇದನ್ನೂ ಓದಿ | Black panther : ಕಡ್ಲೆ ಗ್ರಾಮದಲ್ಲಿ ಇಟ್ಟ ಬೋನಿನಲ್ಲಿ ಬಿದ್ದದ್ದು ಸಾಮಾನ್ಯ ಚಿರತೆಯಲ್ಲ, ಅದು ಕರಿ ಚಿರತೆ!
ಕಾಲೇಜು ಸೀಟು ಕೊಡಿಸುವುದಾಗಿ 100 ವಿದೇಶಿ ವಿದ್ಯಾರ್ಥಿಗಳಿಗೆ ವಂಚನೆ
ಬೆಂಗಳೂರು: ಕಾಲೇಜುಗಳಲ್ಲಿ ಆಡ್ಮಿಷನ್ ಮಾಡಿಸುವುದಾಗಿ ಹೇಳಿ, ವೀಸಾ ಪಡೆಯಲು ಕಾಲೇಜಿನ ಹೆಸರಲ್ಲಿ ನಕಲಿ ದಾಖಲೆಗಳನ್ನು ನೀಡುತ್ತಾ, 104 ವಿದೇಶಿ ಪ್ರಜೆಗಳನ್ನು ಭಾರತಕ್ಕೆ ಕರೆಸಿಕೊಂಡು ಕಾಲೇಜಿನಲ್ಲಿ ಆಡ್ಮಿಷನ್ ಮಾಡಿಸದೆ ಅಕ್ರಮವಾಗಿ ನೆಲೆಸಲು ನೆರವಾಗಿದ್ದ ಆರೋಪಿಯನ್ನು (Fraud Case) ಬಂಧಿಸಲಾಗಿದೆ.
ಬೆಂಗಳೂರಿನ ಡಿ.ಜಿ. ಹಳ್ಳಿ ನಿವಾಸಿ ಸಮೀರ್ ಖಾನ್ ಎಂಬಾತ ಗಲ್ಫ್ ರಾಷ್ಟ್ರಗಳಾದ ಯೆಮನ್, ಸೌದಿ ಅರೇಬಿಯಾ, ಇರಾನ್ ಮುಂತಾದ ರಾಷ್ಟ್ರಗಳ ಸುಮಾರು 104 ವಿದ್ಯಾರ್ಥಿಗಳಿಗೆ ವಂಚಿಸಿದ್ದಾನೆ. ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿರುವ ಸವಿತಾ ಮಹರ್ಷಿ ಪದವಿ ಕಾಲೇಜಿನಲ್ಲಿ ವಿವಿಧ ಡಿಗ್ರಿ ಕೋರ್ಸುಗಳಿಗೆ ಆಡ್ಮಿಷನ್ ಮಾಡಿಸುವುದಾಗಿ ಹೇಳಿದ್ದಾನೆ.
ಕಾಲೇಜಿನ ಹೆಸರಿನಲ್ಲಿ ಅಡ್ಮಿಷನ್ ಲೆಟರ್‌ಗಳನ್ನು ನೀಡಿ, ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬರಲು ವೀಸಾ ಸಿಗುವಂತೆ ಮಾಡಿ, ಭಾರತಕ್ಕೆ ಬಂದ 104 ವಿದ್ಯಾರ್ಥಿಗಳಿಗೆ ಬೋನಾಫೈಡ್ ಸರ್ಟಿಫಿಕೇಟ್‌ಗಳನ್ನು ನೀಡಿದ್ದಾನೆ. ಆನಂತರ ಅವರುಗಳಿಗೆ ಸವಿತಾ ಮಹರ್ಷಿ ಪದವಿ ಕಾಲೇಜಿನಲ್ಲಿ ಅಡಿಷನ್ ಮಾಡಿಸದೇ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಲು ನೆರವಾಗಿದ್ದ.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿ.ಸಿ.ಬಿ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿದೇಶಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಭಾರತಕ್ಕೆ ಬರಲು ನೆರವು ನೀಡಿದ್ದ ಆರೋಪಿ ಸಮೀರ್ ಖಾನ್ ಎಂಬುವ ಏಜೆಂಟ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Indecent behaviour : ಭಟ್ಕಳದಲ್ಲಿ ಮುಸ್ಲಿಂ ಮಹಿಳೆಯರ ಜತೆ ಅಸಭ್ಯ ವರ್ತನೆ; ಇಬ್ಬರು ಹಿಂದು ಯುವಕರ ಸಹಿತ ಏಳು ಮಂದಿ ವಶಕ್ಕೆ
ತನಿಖೆಯಲ್ಲಿ ಆರೋಪಿ ಸಮೀರ್ ಖಾನ್ ಅಕ್ರಮ ಹಣ ಗಳಿಸುವ ಉದ್ದೇಶದಿಂದ ಸವಿತಾ ಮಹರ್ಷಿ ಪದವಿ ಕಾಲೇಜಿನ ಹೆಸರಿನಲ್ಲಿ ಎಫ್ಆರ್‌ಆರ್‌ಓ ಕಛೇರಿಯಲ್ಲಿ ಎಫ್ಎಸ್ಐಎಸ್ ಐಡಿ, ಪಡೆದುಕೊಂಡು, ಕಾಲೇಜಿನ ಪರವಾಗಿ ಈತನೇ ವ್ಯವಹರಿಸುತ್ತಿದ್ದ ಎಂದು ತಿಳಿದು ಬಂದಿದೆ. ಕಾಲೇಜಿನ ಪರವಾಗಿ 104 ವಿದೇಶಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಮತ್ತು ಬೋನಾಪೈಡ್ ಲೆಟೆರ್‌ಗಳನ್ನು ಕಾಲೇಜಿನ ಲೆಟರ್‌ಹೆಡ್‌ನಲ್ಲಿ ವಿತರಿಸಿದ್ದ. ಈ ಮೂಲಕ ಭಾರತಕ್ಕೆ ವಿದೇಶಿ ಪ್ರಜೆಗಳು ಬಂದಿದ್ದರು.
ಸದ್ಯ ಈ ಪ್ರಕರಣದಲ್ಲಿ ಸವಿತಾ ಮಹರ್ಷಿ ಪದವಿ ಕಾಲೇಜಿನ ಪಾತ್ರವಿದೆಯೇ ಹಾಗೂ ಆರೋಪಿ ಸಮೀರ್ ಖಾನ್‌ನೊಂದಿಗೆ ಬೇರೆ ಯಾವ ಯಾವ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.