Site icon Vistara News

Road Accident: ಸ್ಕೂಟಿಗೆ ಕಾರು ಡಿಕ್ಕಿಯಾಗಿ ತಂದೆ ಸಾವು, ಮಗಳಿಗೆ ಗಂಭೀರ ಗಾಯ

Car hits scooty

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಬಾಳೆಗುಳಿ ಬಳಿ ಸ್ಕೂಟಿಯಲ್ಲಿ ಕಾರು ಡಿಕ್ಕಿಯಾಗಿ ತಂದೆ ಮೃತಪಟ್ಟು, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪ್ಪ-ಮಗಳು ಗಣೇಶ ಹಬ್ಬಕ್ಕೆಂದು ಬೈಕ್‌ನಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಅಪಘಾತ (Road Accident) ನಡೆದಿದೆ.

ಕಾರವಾರದ ಗುರುಮಠ ನಿವಾಸಿ ಉದಯ ನಾಯ್ಕ(65) ಮೃತರು. ಅನುಪಾ ನಾಯ್ಕ (33) ಗಾಯಾಳು. ಸಂಬಂಧಿಕರ ಮನೆಗೆ ಗಣೇಶ ಹಬ್ಬಕ್ಕೆಂದು ಕಾರವಾರದಿಂದ ಗೋಕರ್ಣ ಕಡೆ ತಂದೆ, ಮಗಳು ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | ISIS Terrorist: ಭಟ್ಕಳದಂತೆ ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಪಣ ತೊಟ್ಟಿದ್ದರು ಕಿರಾತಕರು!

ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕತ್ತು ಕತ್ತರಿಸಿದ!

ಬೆಂಗಳೂರು: ಕೆಟ್ಟದಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬ ಬೆಂಗಳೂರಲ್ಲಿ (Murder Case ) ಕೊಲೆಯಾಗಿ ಹೋಗಿದ್ದಾನೆ. ಫಾರುಕ್‌ ಮೃತಪಟ್ಟವನು. ಮುಬಾರಕ್, ಸುಹೇಲ್, ಆಲಿ ಅಕ್ರಮ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಮತ್ತು ಕೊಲೆಯಾದವರು ಎಲ್ಲರೂ ಪರಿಚಿತರೇ ಆಗಿದ್ದಾರೆ. ಕೊಲೆಯಾದ ಫಾರುಕ್‌ ಸುಖಾಸುಮ್ಮನೆ ಸೋಹೆಲ್‌ ಎಂಬಾತನಿಗೆ ಬೆದರಿಕೆ ಹಾಕುತ್ತಿದ್ದ. ಸೋಹೆಲ್‌ ಗಾಂಜಾ ಮಾರಾಟ ಮಾಡದೆ ಇದ್ದರೂ, ಫಾರೂಕ್‌ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಪೊಲೀಸರಿಗೆ ಹೇಳುತ್ತಿನಿ ಎಂದು ಹೆದರಿಸುತ್ತಿದ್ದ. ಜತೆಗೆ ಏರಿಯಾದಲ್ಲಿ ಸೋಹೆಲ್‌ ಕೆಟ್ಟವನು ಎಂಬಂತೆ ಬಿಂಬಿಸುತ್ತಿದ್ದ.

ಬಂಧಿತ ಆರೋಪಿಗಳು

ಇದನ್ನೂ ಓದಿ: Road Romeo : ಹುಡುಗಿಯರಿಗೆ ಕರೆ ಮಾಡಿ ಕಾಡುತ್ತಿದ್ದ ರೋಮಿಯೊಗೆ ರೋಡಲ್ಲೇ ಗೂಸಾ; ವಿಡಿಯೊ ಕಾಲ್‌ ಮಾಡ್ಲಾ ಅಂತಿದ್ದ!

ಈ ವಿಚಾರವಾಗಿ ಸೋಹೆಲ್‌ ಕೋಪಗೊಂಡಿದ್ದ. ಹೀಗಾಗಿ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಈ ಫಾರುಕ್‌ನನ್ನು ಮುಗಿಸಲು ಪ್ಲ್ಯಾನ್‌ ಮಾಡಿದ್ದರು. ಅದರಂತೆ ಕಳೆದ 17 ರಂದು ಫಾರುಕ್‌ನನ್ನು ಆಟೋವೊಂದರಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ಚಾಕುವಿನಿಂದ ಫಾರುಕ್‌ನ ಕತ್ತು ಕತ್ತರಿಸಿದ್ದಾರೆ.

ಹತ್ಯೆ ಮಾಡಿ ಎಸ್ಕೇಪ್‌ ಆದ ಮೂವರು ಮಾರನೇ ದಿನ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾರೆ. ಸದ್ಯ ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಫಾರುಕ್‌ನಿಂದ ಸಾಲಪಡೆದಿದ್ದ ಸುಹೇಲ್‌

ಫಾರುಕ್‌ ಬಳಿ 20 ಸಾವಿರ ರೂ. ಸಾಲವನ್ನು ಸುಹೇಲ್‌ ಪಡೆದುಕೊಂಡಿದ್ದ. ಸಾಲ ವಾಪಸ್‌ ಕೇಳುವ ನೆಪದಲ್ಲಿ ಫಾರುಕ್‌ ಹಾಗೂ ಆತನ ಸ್ನೇಹಿತ ಸದ್ದಾಂ ಸುಹೇಲ್‌ನ ಮೊಬೈಲ್‌ ಅನ್ನು ಕಿತ್ತುಕೊಂಡಿದ್ದ. ಆ ಮೊಬೈಲ್‌ನಲ್ಲಿ ಸುಹೇಲ್ ತಾಯಿಯ ಫೋಟೋ ಇದ್ದರಿಂದ ಮೊಬೈಲ್ ಕೊಡುವಂತೆ ಸಾಕಷ್ಟು ಬಾರಿ ಕೇಳಿದ್ದ. ಆದರೆ ಫಾರುಕ್‌ ಮೊಬೈಲ್ ಕೊಡದೇ ಸತಾಯಿಸಿದ್ದ.

ಇದನ್ನೂ ಓದಿ | VISTARA TOP 10 NEWS : ಗ್ಯಾರಂಟಿಗೆ ಪ್ರತಿಯಾಗಿ ಮೋದಿಯ ನಾರಿಶಕ್ತಿ ಅಸ್ತ್ರ, ಕಟಕ್‌ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ ಕಳಚಿದರು ಕಾವಿವಸ್ತ್ರ!

ಈ ನಡುವೆ 20 ಸಾವಿರ ರೂ. ಸಾಲ ವಾಪಸ್‌ ಕೊಡು ಇಲ್ಲವಾದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದಿದ್ದ. ಫಾರುಕ್‌ಗೆ ಬೆದರಿಸಿ ವಾರ್ನ್‌ ಮಾಡಲು ಈ ಮೂವರು ಕರೆಸಿಕೊಂಡಿದ್ದರು. ಹೆದರಿಸಲು ಫಾರುಕ್‌ ಕೈಗೆ ಚಾಕು ಇರಿದಿದ್ದರು. ಆದರೆ ಆತ ತಿರುಗಿ ಬಿದ್ದಾಗ ಮಿಸ್‌ ಆಗಿ ಕುತ್ತಿಗೆಗೆ ತಾಗಿತ್ತು. ಇವನು ಬದುಕಿದರೂ ಕೂಡ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸುತ್ತಾರೆ. ಅದರ ಬದಲು ಕೊಂದೇ ಬಿಡೋಣ ಎಂದು ನಿರ್ಧರಿಸಿ ಹತ್ಯೆ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version