Site icon Vistara News

ಬೆಳಗಾವಿ| ನಾಲ್ಕು ವರ್ಷದ ಮಗುವಿನ ಕತ್ತು ಕುಯ್ದು ಹತ್ಯೆ ಮಾಡಿದ ತಂದೆ

crime news today

ಬೆಳಗಾವಿ: ವ್ಯಕ್ತಿಯೋರ್ವ ಪತ್ನಿ ಜತೆ ಜಗಳವಾಡುವ ಸಂದರ್ಭದಲ್ಲಿ ಸಿಟ್ಟಿನಿಂದ ಆಕೆಯ ಮತ್ತು ನಾಲ್ಕು ವರ್ಷದ ಮಗುವಿನ ಕತ್ತು ಕುಯ್ದಿದ್ದು, ಮಗು ಮೃತಪಟ್ಟ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದಲ್ಲಿ ನಡೆದಿದೆ.

ಮುತ್ತೆಪ್ಪ ಅಕ್ಕನಿ ಎಂಬಾತ ಈ ಕೃತ್ಯ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನ ಪತ್ನಿ ಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಲ್ತಿಭಾವಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

ಗದ್ದೆಯಲ್ಲಿದ್ದ ಮುತ್ತೆಪ್ಪ ಅಕ್ಕನಿ ಮತ್ತು ಲಕ್ಷ್ಮೀ ನಡುವೆ ಜಗಳ ನಡೆದಿದ್ದು, ಸಿಟ್ಟಿನಿಂದ ಮುತ್ತೆಪ್ಪ ಕೈಯಲ್ಲಿದ್ದ ಕುಡಗೋಲಿನಿಂದ ಮೊದಲಿಗೆ ಲಕ್ಷ್ಮೀಯ ಕತ್ತು ಕುಯ್ದಿದ್ದಾನೆ. ನಂತರ ನಾಲ್ಕು ವರ್ಷದ ಮಗನ ಕತ್ತನ್ನೂ ಕುಯ್ದಿದ್ದು, ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.

ಮುತ್ತೆಪ್ಪನನ್ನು ಬಂಧಿಸಿರುವ ಗೋಕಾಕ ಗ್ರಾಮೀಣ ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Exit mobile version