ಬೆಂಗಳೂರು: ಕೌಟುಂಬಿಕ ಕಲಹದಿಂದ (Domestic violence) ಮನನೊಂದು ಬೆಂಗಳೂರಿನ ಜೋಗುಪಾಳ್ಯದಲ್ಲಿ ದಿವ್ಯ (30) ಎಂಬುವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ಇವರು ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಸೂಸೈಡ್ (Self Harming) ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಹುಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿವ್ಯಾಳ ಪತಿ ಅರವಿಂದ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿವ್ಯಾ 2014ರಲ್ಲಿ ಅರವಿಂದ್ರನ್ನು ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಪ್ರತಿದಿನ ಅರವಿಂದ್ ಮತ್ತು ಅವನ ಮನೆಯವರು ದಿವ್ಯಾಗೆ ಕಿರುಕುಳ ನೀಡುತ್ತಿದ್ದರು. ಇನ್ನೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ಪತಿಯ ಮನೆಯಲ್ಲಿ ಉಳಿದವರೆಲ್ಲ ವಿರೋಧಿಸಿದರೂ, ಪತಿಯಾದರೂ ಜತೆಗಿದ್ದರೆ ಎಷ್ಟೋ ನೆಮ್ಮದಿ. ಆದರೆ ದಿವ್ಯಾ ವಿಷಯದಲ್ಲಿ ಹಾಗಿರಲಿಲ್ಲ. ಆಕೆ ಹೊರಗೆ ದುಡಿಯುತ್ತಿದ್ದರು, ಮನೆಯಲ್ಲೂ ಕೆಲಸ ಮಾಡುತ್ತಿದ್ದರು. ಆದರೆ ಪತಿಯ ಪ್ರೀತಿಯೂ ಸಿಕ್ಕಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ದಿವ್ಯಾಗೆ ಸರಿಯಾಗಿ ಊಟ ಕೂಡ ನೀಡದೆ ಹಿಂಸೆ ನೀಡುತ್ತಿದ್ದರು.
ಇದನ್ನೂ ಓದಿ: Self Harming : ಪತ್ನಿಯ ಪರಸಂಗಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ
ತುಂಬ ದಿನಗಳಿಂದ ಮನನೊಂದಿದ್ದ ದಿವ್ಯಾ ನಿನ್ನೆ ರೂಮ್ಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಗಂಡನ ಮನೆಯವರು ಎಷ್ಟೇ ಬಾಗಿಲು ಬಡಿದರೂ ತೆರೆಯಲಿಲ್ಲ. ನಂತರ ಅರವಿಂದ್ ಅತ್ತೆ ಮನೆಯವರಿಗೆ ಅಂದರೆ ದಿವ್ಯಾ ಪಾಲಕರಿಗೆ ಕರೆ ಮಾಡಿದ್ದಾನೆ. ದಿವ್ಯಾ ಡೋರ್ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಬಾಗಿಲು ಬಡಿದರೂ ತೆರೆಯುತ್ತಿಲ್ಲ ಎಂದು ಹೇಳಿದ್ದಾನೆ. ದಿವ್ಯಾ ಕುಟುಂಬಸ್ಥರು ಅಲ್ಲಿಗೆ ಬಂದು ನೋಡುವಷ್ಟರಲ್ಲಿ ಆಕೆ ರೂಮ್ನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು. ಇದೀಗ ದಿವ್ಯಾ ಪಾಲಕರು ಅರವಿಂದ್ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಅರವಿಂದ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.