ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ (Cariappa College) ಪ್ರತಿ ವರ್ಷ ಕಲಾ ವೈಭವ ಉತ್ಸವವನ್ನು ಅದ್ಧೂರಿಯಾಗಿ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷದ ಕಲಾ ವೈಭವ ಉತ್ಸವವನ್ನು ಜೂನ್ 3ರಂದು ಹಮ್ಮಿಕೊಳ್ಳಲಾಗಿದ್ದು, ಉತ್ಸವದ ಲೋಗೋವನ್ನು ಬುಧವಾರ (ಮೇ 17) ಬಿಡುಗಡೆ ಮಾಡಲಾಯಿತು.
ಈ ಕಲಾ ವೈಭವ ಉತ್ಸವವು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯ ವೇದಿಕೆಯಾಗಿದೆ. ಇಲ್ಲಿ ಸಾಂಸ್ಕೃತಿಕ, ವೈಚಾರಿಕ ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶ ನೀಡಲಾಗುತ್ತದೆ.
ಪ್ರಾಂಶುಪಾಲರಾದ ಮೇಜರ್ ಡಾ. ರಾಘವ ಬಿ. ಕಲಾ ಉತ್ಸವ ’ಕಲಾ ವೈಭವ’ ಲೋಗೋ ಅನಾವರಣಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದರೆ, ಸೃಜನಶೀಲತೆಯೂ ಹೆಚ್ಚುತ್ತದೆ. ಆ ಅವಕಾಶವನ್ನು ನಾವು ನಮ್ಮ ಕಾಲೇಜಿನ ಮೂಲಕ ಮಾಡಿಕೊಡುತ್ತಿದ್ದೇವೆ. ಜತೆಗೆ ಸ್ಪರ್ಧಾತ್ಮಕ ಯುಗದಲ್ಲಿಯೂ ಯಶಸ್ಸಿನ ಗುರಿಯತ್ತ ಸಾಗಲು ಸಹಕಾರಿಯಾಗುವಂತೆ ನಮ್ಮ ಚಟುವಟಿಕೆ ಸಾಗಿವೆ ಎಂದು ಹೇಳಿದರು.
ಇದನ್ನೂ ಓದಿ: May Flower: ಶಿರಸಿ ರಸ್ತೆಯಲ್ಲೀಗ ಮೇ ಫ್ಲವರ್ ಶೋ; ಕಣ್ಮನ ಸೆಳೆಯುತ್ತಿವೆ ಪ್ರಕೃತಿಯ ಈ ಸೊಬಗು!
ಕಲಾ ಉತ್ಸವದ ’ಕಲಾ ವೈಭವ’ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸಿದರು. ಇದೀಗ ಕಾಲೇಜಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.