Site icon Vistara News

Video Viral: ಬಸ್‌ನಲ್ಲೇ ಬಡಿದಾಡಿಕೊಂಡ ನಿರ್ವಾಹಕ- ಮಹಿಳೆಯರು; ಕಂಡಕ್ಟರ್‌ಗೆ ನಾರಿಯರ ಏಟು ಉಚಿತ!

Fight between conductor and women in savadatti ksrtc bus video viral

ಬೆಳಗಾವಿ: ಮಹಿಳಾ ಸಬಲೀಕರಣದ ದೃಷ್ಟಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು (Shakti Scheme) ಸಾರಿಗೆ ಸಿಬ್ಬಂದಿಯನ್ನು ಹೈರಾಣಾಗಿಸಿದೆ. ಉಚಿತ ಬಸ್‌ ಸೇವೆ (Free Bus Service) ಹಿನ್ನೆಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಾರಿಗೆ ಸಿಬ್ಬಂದಿ ಜತೆ ವಾಗ್ವಾದ, ಹಲ್ಲೆಗಳು ನಡೆಯುತ್ತಿರುವುದು ಆತಂಕವನ್ನು ಹುಟ್ಟುಹಾಕಿದೆ. ಈ ನಡುವೆ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕರೊಬ್ಬರ ಮೇಲೆ ಮಹಿಳಾ ಪ್ರಯಾಣಿಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ವಿಡಿಯೊ ವೈರಲ್‌ (Video Viral) ಆಗಿದೆ.

ಜೂನ್ 23ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದೆ. ದಡೇರಕೊಪ್ಪ – ಸವದತ್ತಿ ಮಾರ್ಗದಲ್ಲಿ ಸಂಚರಿಸುವ ಬಸ್‌‌ ಇದಾಗಿದ್ದು, ಸವದತ್ತಿ ಡಿಪೋಗೆ ಈ ಬಸ್‌ ಸೇರಿದೆ. ಬಸ್‌‌ನಲ್ಲಿ ನಿರ್ವಾಹಕ ಮತ್ತು ಮಹಿಳಾ ಪ್ರಯಾಣಿಕರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಿರ್ವಾಹಕ ಬಿ.ಎಸ್. ಭದ್ರಣ್ಣವರ್ ಹಾಗೂ ಮಹಿಳಾ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Love Jihad: ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಬ್ಯಾಕ್ ಸೈಟ್: ಆರ್. ಅಶೋಕ್‌

ವಾಗ್ವಾದ ವಿಕೋಪಕ್ಕೆ ತಿರುಗಿ ಮಹಿಳೆ ಮೇಲೆ ಕೈ ಮಾಡಲು ನಿರ್ವಾಹಕ ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ರೊಚ್ಚಿಗೆದ್ದ ಮಹಿಳೆಯರು, ಆಗ ನಿರ್ವಾಹಕನನ್ನೇ ಎಳೆದು ಬಡಿದಿದ್ದಾರೆ ಎಂದು ಹೇಳಲಾಗಿದೆ. ಪರಸ್ಪರ ಬಡಿದಾಡಿಕೊಂಡ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಹಿಳೆಯರಿಂದ ಹಲ್ಲೆ- ನಿರ್ವಾಹಕ ದೂರು

ತಮ್ಮ ಮೇಲೆ ಮಹಿಳಾ ಪ್ರಯಾಣಿಕರು ಹಲ್ಲೆ ಮಾಡಿದ್ದಾರೆ ಎಂದು ಬಸ್ ನಿರ್ವಾಹಕ ಬಿ.ಎಸ್. ಭದ್ರಣ್ಣವರ್ ಅವರು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಬಸ್ ಹೊರಡಬೇಕು ಬೇಗ ಬನ್ನಿ ಎಂದಾಗ ಓರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆಗ ನಾನು ವಾಪಸ್ ಮಾತನಾಡಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಹೆಣ್ಣು ಮಕ್ಕಳಿಗೆ ಹೇಳಿ ಹಲ್ಲೆ ಮಾಡಲು ಆ ವ್ಯಕ್ತಿ ಪ್ರಚೋದನೆ ನೀಡಿದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಂಡಕ್ಟರ್‌ಗೆ ಏಟು ಉಚಿತ! ಇಲ್ಲಿದೆ ನೋಡಿ ವಿಡಿಯೊ!

ಇದನ್ನೂ ಓದಿ: Video Viral: ಕಳ್ಳಿಯ ʼಶಕ್ತಿʼ ಪ್ರದರ್ಶನ; ಮಾಂಗಲ್ಯ ಕದ್ದು ನಾನವಳಲ್ಲ ಎಂದವಳ ಜುಟ್ಟು ಹಿಡಿದಳು!

ವಿಜಯಪುರ ಮೂಲದ ಏಳೆಂಟು ಮಹಿಳೆಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸೀಟ್ ಮೇಲೆ ಕೂರಿಸಿ, ಒದ್ದು ಹಲ್ಲೆ ಮಾಡಿದ್ದಾರೆ. ಕೈ, ಕಾಲಿಗೆ ಪರಚಿದ್ದಾರೆ. ನಾನು ಆ ಮಹಿಳೆಯರಿಗೆ ಇನ್ನೂ ಟಿಕೆಟ್ ನೀಡಿರಲಿಲ್ಲ ಎಂದ ನಿರ್ವಾಹಕ ಬಿ.ಎಸ್. ಭದ್ರಣ್ಣವರ್ ದೂರಿನಲ್ಲಿ ಹೇಳಿದ್ದಾರೆ.

Exit mobile version