Site icon Vistara News

Kantara Movie | ಕಾಂತಾರ ಕಳಪೆ ಎಂದ ಬಾಲಿವುಡ್‌ ನಿರ್ದೇಶಕ ಅಭಿರೂಪ್‌ ಬಸು, ಜಾಡಿಸಿದ ನೆಟ್ಟಿಗರು

Kantara

ಮುಂಬೈ/ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ (Kantara Movie) ಕರ್ನಾಟಕ, ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಬಾಕ್ಸ್‌ ಆಫೀಸ್‌ನಲ್ಲೂ ಸದ್ದು ಮಾಡಿರುವ ಸಿನಿಮಾ, 200 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌, ಪ್ರಭಾಸ್‌, ಅನುಷ್ಕಾ ಶೆಟ್ಟಿ, ರಾಮ್‌ಗೋಪಾಲ್‌ ವರ್ಮಾ ಸೇರಿ ಸಿನಿಮಾ ರಂಗದ ಹಲವು ದಿಗ್ಗಜರು ಕಾಂತಾರ ಸಿನಿಮಾವನ್ನು ಶ್ಲಾಘಿಸಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ ನಿರ್ದೇಶಕ ಅಭಿರೂಪ್‌ ಬಸು (Abhiroop Basu) ಅವರು, ಕಾಂತಾರ ಸಿನಿಮಾವನ್ನು ಕಳಪೆ ಎಂದಿದ್ದಾರೆ. ಆದರೆ, ಇದಕ್ಕೆ ಜನ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಂತಾರ ಸಿನಿಮಾ ಬುದ್ಧಿವಂತಿಕೆಯ ಅಣಕ ಎಂಬಂತೆ ನನಗೆ ಭಾಸವಾಗುತ್ತಿದೆ. ಕಳಪೆಯಾಗಿರುವ, ಜೋರಾಗಿ ಕೂಗಾಟ ಇರುವ, ಕತೆ ನಿರೂಪಣೆಯಲ್ಲಿ ರಿವರ್ಸ್‌ ಇರುವ, ಪಾತ್ರಗಳಲ್ಲಿ ನೈಜತೆ ಇಲ್ಲದ, ಟ್ವಿಸ್ಟ್‌ಗಳನ್ನು ಕೊಡಲೆಂದೇ ಗಿಮಿಕ್‌ ಮಾಡಿರುವ ಸಿನಿಮಾ ಇದಾಗಿದೆ. ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬರುವ ವೇಳೆಗೆ ನನ್ನ ಆಸಕ್ತಿಯೇ ಕುಸಿದುಹೋಗಿದೆ” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಜಾಲತಾಣದಲ್ಲಿ ಜಾಡಿಸಿದ ಜನ

ಸಿನಿಮಾ ಸೂಪರ್‌ ಹಿಟ್‌ ಆದರೂ, ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಗಳಿಸಿದರೂ ಅಭಿರೂಪ್‌ ಬಸು ಟೀಕಿಸಿದ ಕಾರಣ ಅವರಿಗೆ ಜಾಲತಾಣದಲ್ಲಿ ಜನ ತಿರುಗೇಟು ನೀಡಿದ್ದಾರೆ. “ಒಂದು ಸಿನಿಮಾ ಚೆನ್ನಾಗಿದೆಯೋ, ಇಲ್ಲವೋ ಎಂಬುದನ್ನು ಜನ ನಿರ್ಧರಿಸುತ್ತಾರೆಯೇ ಹೊರತು, ನಿರ್ದೇಶಕ ಅಲ್ಲ. ನೀವು ತಪ್ಪಗೆ ಇದ್ದುಬಿಡಿ” ಎಂದು ಟ್ವಿಟರ್‌ನಲ್ಲಿ ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನೀವು ಮಾಡಿದ ಟೀಕೆ ಬ್ರಹ್ಮಾಸ್ತ್ರ ಸಿನಿಮಾಗೆ ಅನ್ವಯವಾಗುತ್ತದೆ” ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ. ಅಭಿರೂಪ್‌ ಬಸು ಅವರು ಲಾಲಿ, ಮೀಲ್‌ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | Kantara Movie | 200 ಕೋಟಿ ಭರ್ಜರಿ ಕಲೆಕ್ಷನ್‌ನತ್ತ ಕಾಂತಾರ!

Exit mobile version