ಚಿತ್ರದುರ್ಗ: ಮಾಜಿ ಸಚಿವ ಗೋವಿಂದ ಕಾರಜೋಳ (Govind Karjol) ಸುದ್ದಿಗೋಷ್ಠಿ ವೇಳೆ ದಾಂಧಲೆ ಪ್ರಕರಣದಲ್ಲಿ 10 ಜನರ ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸುದ್ದಿಗೋಷ್ಠಿ ವೇಳೆ ಗಲಾಟೆ ನಡೆಸಿದ್ದ ಮಾದಿಗ ಮಹಾಸಭಾದ ಸದಸ್ಯರ ವಿರುದ್ಧ ಮಾಜಿ ಸಚಿವರ ಗನ್ ಮ್ಯಾನ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ವೇಳೆ ಮಾದಿಗ ಮಹಾಸಭಾದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಅನ್ಯಾಯ ಆಗಿದೆ. ಈಗ ನೀವೇನು ದಲಿತರ ಬಗ್ಗೆ ಮಾತನಾಡುವುದು ಎಂದು ಗೋವಿಂದ ಕಾರಜೋಳ ವಿರುದ್ಧ ಕಿಡಿಕಾರಿದ್ದರು.
ಇದನ್ನೂ ಓದಿ | BBMP Scam: ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಚಿಸಿದ್ದ ಎಸ್ಐಟಿ ರದ್ದು ಮಾಡಿದ ಕೈ ಸರ್ಕಾರ
ಘಟನೆಯ ಬಗ್ಗೆ ಗೋವಿಂದ ಕಾರಜೋಳ ಅವರ ಗನ್ ಮ್ಯಾನ್ ಶ್ರೀಶೈಲ್ ನೀಡಿದ ದೂರಿನನ್ವಯ ಹನುಮಂತಪ್ಪ ದುರ್ಗ, ದೇವರಾಜ, ಗಂಗಾಧರ, ಸತೀಶ್, ಮುನಿಯಪ್ಪ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ.
ಯುವಕನ ಪೋಷಕರ ಮೇಲೆ ಹಲ್ಲೆ ಪ್ರಕರಣ; ನಾಲ್ವರು ವಶಕ್ಕೆ
ಚಿಕ್ಕಬಳ್ಳಾಪುರ: yuvkn ಪೋಷಕರ ಮೇಲೆ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಆರೋಪಿಗಳನ್ನು ಗುಡಿಬಂಡೆ ಪೋಲೀಸ್ ಠಾಣೆಯಿಂದ ಕರೆದೊಯ್ದು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ | Assault Case : ಹೆಂಡತಿ ಕಣ್ಣಿನ ಗುಡ್ಡೆಯನ್ನೇ ಕಚ್ಚಿ ಕಿತ್ತೊಗೆದ ಕ್ರೂರಿ!
ಯುವತಿಯ ತಂದೆ ಶ್ರೀನಿವಾಸ, ವೆಂಕಟೇಶಪ್ಪ, ಆನಂದಪ್ಪ ಹಾಗೂ ಗೋವಿಂದಪ್ಪ ಬಂಧಿತ ಆರೋಪಿಗಳು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಪ್ರೇಮಿಗಳು ಓಡಿ ಹೋಗಿ ಮದುವೆಯಾದ ಹಿನ್ನೆಲೆಯಲ್ಲಿ ಯುವಕನ ಪೋಷಕರ ಮೇಲೆ ಯುವತಿ ಕುಟುಂಬಸ್ಥರಿಂದ ಹಲ್ಲೆ ನಡೆದಿತ್ತು.