Site icon Vistara News

Dr Mallika Ghanti : ಹಂಪಿ ವಿವಿಗೆ ಆರ್ಥಿಕ ನಷ್ಟ; ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ವಿರುದ್ದ ದಾಖಲಾಯ್ತು FIR

Dr Mallika Ghanti

ಹೊಸಪೇಟೆ: ಕನ್ನಡ ನಾಡು ನುಡಿ ಉಳಿವಿಗೋಸ್ಕರ ಜನ್ಮ ತಾಳಿದ ಹಂಪಿ ವಿಶ್ವವಿದ್ಯಾಲಯದ (Hampi Kannada University) ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ (Dr Mallika Ghanti) ಅವರ ವಿರುದ್ಧ ವಿಜಯನಗರ ಜಿಲ್ಲೆಯ (Vijaya Nagara News) ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ (Kamalapura Police station) ದೂರು ದಾಖಲಾಗಿದೆ. ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದಡಿ ಅವರ ಮೇಲೆ ಕೇಸು ದಾಖಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಆಪ್ತ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾ ಘಂಟಿ ಅವರು ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟು ಮಾಡುವುದರೊಂದಿಗೆ ಉದ್ದೇಶಪೂರ್ವಕವಾಗಿ ಕೆಟಿಪಿಪಿ ಕಾಯ್ದೆ (KTPP Act) ಉಲ್ಲಂಘಿಸಿದ್ದಾರೆ ಎಂದು ಆರೋಪಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ ದೂರು ನೀಡಿದ್ದರು.

2015ರ ಸೆಪ್ಟೆಂಬರ್‌ನಲ್ಲಿ ಮಲ್ಲಿಕಾ ಘಂಟಿ ಅವರು ಕನ್ನಡ ವಿವಿಯ ಕುಲಪತಿಯಾಗಿ ನೇಮಕಗೊಂಡಿದ್ದರು. ಡಾ. ಮಲ್ಲಿಕಾ ಘಂಟಿ 2015-16 ಹಾಗೂ 2016-17ರ ಸಾಲಿನಲ್ಲಿ ಸರಿಸುಮಾರು 1.69 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ನಡೆಸಲು KRIDL ಸಂಸ್ಥೆಗೆ ನೀಡಿದ್ದರು. ಒಟ್ಟಾರೆಯಾಗಿ 2015ರಿಂದ 2019ರ ವರೆಗೆ 50.86 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಇ-ಟೆಂಡರ್​ ಇಲ್ಲದೇ ಕೈಗೊಂಡಿದ್ದಾರೆ. ಇದರೊಂದಿಗೆ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ (ಕೆಟಿಸಿಪಿ) ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶೇ. 8ರಷ್ಟು ಸೇವಾ ಶುಲ್ಕ ಮೊತ್ತದ 13.16 ಲಕ್ಷ ರೂಪಾಯಿ ಆರ್ಥಿಕ ನಷ್ಟವನ್ನು ಉಂಟು ಮಾಡಿದ್ದಾರೆ ಆರೋಪಿಸಲಾಗಿದೆ.

ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ಪರಿಷತ್ ನಡೆಸಿದ್ದ ತನಿಖಾ ವರದಿಯನ್ನು ಆಧರಿಸಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತನಿಖೆ ಆದೇಶಿಸಿದ್ದರು. ವಿಶ್ರಾಂತ ಕುಲಪತಿಗಳ ಅವಧಿಯಲ್ಲಿ ಲೋಪ ಆಗಿದೆ ಅಂತ ಮಾಹಿತಿ ನೀಡಲಾಗಿತ್ತು. ಇದೇ ವಿಚಾರವಾಗಿ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಜು.18 ರಂದು ನೀಡಿದ ಅನುಮೋದನೆ ಆಧಾರದ ಮೇಲೆ ಕನ್ನಡ ವಿವಿ ಕುಲಸಚಿವ ಡಾ ಸುಬ್ಬಣ್ಣ ರೈ ನೀಡಿದ ದೂರಿನ ಮೇರೆಗೆ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ, ನಿವೃತ್ತ ಅಧಿಕಾರಿಗಳು ಹಾಗೂ ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಡಾ. ಮಲ್ಲಿಕಾ ಘಂಟಿ ಹಿನ್ನೆಲೆ ಏನು?

ಪ್ರಖರ ವೈಚಾರಿಕ ಹಿನ್ನೆಲೆ ಹೊಂದಿರುವ ಮಲ್ಲಿಕಾ ಘಂಟಿ ಅವರು 1945ರ ಏಪ್ರಿಲ್‌ 4ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಅಗಸಬಾಳದಲ್ಲಿ ಜನಿಸಿದ್ದಾರೆ. ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ ಪಡೆದ ಅವರು ಧಾರವಾಡ ವಿವಿಯಲ್ಲಿ ಎಂಎ ಮಾಡಿದರು. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ್ದಾರೆ. 1982ರಿಂದ 13 ವರ್ಷ ಕಾಲ ಕಲಬುರಗಿ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದ ಅವರು ಡಾ. ಮಲ್ಲಿಕಾ ಸಂಶೋಧನೆ, ಆಡಳಿತ ಮತ್ತು ಪಾಠ ಈ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಗಳಿಸಿದರು. ಸೆಪ್ಟೆಂಬರ್ 2015ರಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದು, ಇತ್ತೀಚೆಗೆ ನಿವೃತ್ತರಾಗಿದ್ದರು.

ಹಿಂದಿನ ಸುದ್ದಿ : Kannada University | ಕೋಟ್ಯಂತರ ರೂಪಾಯಿ ಅವ್ಯವಹಾರ; ಡಾ.ಮಲ್ಲಿಕಾ ಘಂಟಿ ವಿರುದ್ಧ ಎಫ್‌ಐಆರ್‌ಗೆ ಮೀನಮೇಷ?

Exit mobile version