ಬೆಂಗಳೂರು: ಮಹಿಷಾಸುರನಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಫೋಟೊ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ಯಿ ಹಾಗೂ ಸಹಚರರ ವಿರುದ್ಧ ನಗರದ ಹೈ ಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಪಿಸಿಸಿ ಕಾನೂನು ವಿಭಾಗದ ಸೂರ್ಯ ಮುಕುಂದರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರನ ದಾಖಲಿಸಿಕೊಂಡಿದ್ದಾರೆ.
ʼಸೀನಾ ಹಿಂದೂಸ್ತಾನಿʼ ಪೇಜ್ ನಿರ್ವಹಣೆ ಮಾಡುತ್ತಿದ್ದ ತುಮಕೂರಿನ ಶ್ರೀನಿವಾಸ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಷಾಸುರ ಉತ್ಸವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಮಹಿಷನ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಫೋಟೊ ಎಡಿಟ್ ಮಾಡಿ ವಿರೂಪಗೊಳಿಸಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | HD Kumaraswamy : ಜನ ಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್ ನೋಡುತ್ತಿದ್ದ! ಸಿಎಂ – ಎಚ್‌ಡಿಕೆ ವಾರ್
ಮಹಿಷಾಸುರ ಪ್ರತಿಮೆ ವಿರೂಪಗೊಳಿಸಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಸೂರ್ಯ ಮುಕುಂದರಾಜ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಕರಾಟೆಪಟು ಸಾವು
ಮೈಸೂರು: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಸಮೀಪದ ಮಂಡಕಳ್ಳಿ ವಿಮಾನ ನಿಲ್ದಾಣ ಬಳಿ ನಡೆದಿದೆ.
ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ಕರಾಟೆಪಟು ಕಿರಣ್ ರಾಜ್ (22) ಮೃತ ದುರ್ದೈವಿ. ಸ್ನೇಹಿತನಿಗೆ ಬೈಕ್ ನೀಡಲು ಮೈಸೂರಿಗೆ ಕಿರಣ್ ರಾಜ್ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಲ್ನಲ್ಲೇ ಹೊತ್ತಿ ಉರಿದ ಕಾರು
ಮೈಸೂರು: ಟೋಲ್ನಲ್ಲೇ ಕಾರು ಹೊತ್ತಿ ಉರಿದ ಘಟನೆ ಮೈಸೂರು- ನಂಜನಗೂಡು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಟೋಲ್ನಲ್ಲಿ ಹಣ ಕಟ್ಟುವಾಗ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಒಳಗಿದ್ದವರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ಮೈಸೂರಿನ ಪ್ರಸನ್ನ ಎಂಬುವರ ಕಾರು ಹೊತ್ತಿ ಉರಿದಿದ್ದು, ಚಾಲಕ ಶಶಿಕುಮಾರ್ ಸೇರಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.