ಯಲ್ಲಾಪುರ: ತಾಲೂಕಿನ ಉಮ್ಮಚ್ಗಿ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆಯ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಹೊತ್ತಿ ಉರಿದ (Fire Accident) ಆ ಮರವು ಹುಲಿದೇವರ ದೇವಸ್ಥಾನದ ಮೇಲೆ ಬಿದ್ದು ದೇವಸ್ಥಾನಕ್ಕೆ ಹಾನಿಯಾಗಿದೆ.
ಕಿಡಿಗೇಡಿಗಳು ರಾತ್ರಿ ವೇಳೆ ಹಚ್ಚಿದ ಬೆಂಕಿ ಬಾಳೆಗದ್ದೆಯ ಮನೆಯೊಂದರ ಭಾಗದಲ್ಲಿ ರಾತ್ರಿ ಪೂರ್ತಿ ಆವರಿಸಿದೆ. ಅಪಾರ ಪ್ರಮಾಣದ ಗಿಡ ಮರಗಳು ಸುಟ್ಟು ಹೋಗಿವೆ. ಅಲ್ಲದೆ, ರೈತರ ಹೊಲ, ಗದ್ದೆಗಳಿಗೂ ವ್ಯಾಪಿಸಿದೆ. ಮಲ್ಲಾಪುರದ ಪಿ.ವಿ.ಹೆಗಡೆ ಎಂಬುವವರು ತಮ್ಮ ಜಮೀನಿನಲ್ಲಿ ಹಾಕಿದ್ದ ಬಲೆಗಳು ಸುಟ್ಟು ಹೋಗಿವೆ. ಬಾಳೆಗದ್ದೆಯ ಟಿ.ವಿ. ಹೆಗಡೆಯವರ ಕರಡದ ಬೇಣಕ್ಕೂ ಬೆಂಕಿ ಆವರಿಸಿದೆ. ಅಲ್ಲಿಯೇ ಹತ್ತಿರವೇ ಇದ್ದ ದೊಡ್ಡ ಬಿಲ್ಕಂಬಿ ಮರಕ್ಕೂ ಬೆಂಕಿ ತಗುಲಿದ್ದು, ಬೆಳಗಿನ ಜಾವದ ಸುಮಾರಿಗೆ ಮರವು ದೇವಸ್ಥಾನದ ಮೇಲೆ ಬಿದ್ದಿದೆ.
ಇದನ್ನೂ ಓದಿ: Literature: ಕನ್ನಡ ಸಣ್ಣಕಥೆ ಲೋಕದ ಹುಲುಸಾದ ಬೆಳೆ! ಲಕ್ಷ ರೂ.ಗೆ ಬಂದು ನಿಂತ ಬಹುಮಾನದ ಮೊತ್ತ!!
ಮರ ಬಿದ್ದ ಪರಿಣಾಮ ದೇವಸ್ಥಾನದ ಸಿಮೆಂಟ್ ಶೀಟ್ ಮತ್ತು ಅದಕ್ಕೆ ಬಳಸಿದ್ದ ಕಬ್ಬಿಣದ ಸಾಮಗ್ರಿಗಳು ಹಾಳಾಗಿವೆ. ಪಕ್ಕದಲ್ಲಿರುವ ಕರೆಂಟ್ ಲೈನ್ ಕೂಡ ಕಡಿದು ಬಿದ್ದಿದೆ. ಸುದ್ದಿ ತಿಳಿದ ತಕ್ಷಣ ದೇವಸ್ಥಾನ ಕಮಿಟಿಯ ಅಧ್ಯಕ್ಷ ಉದಯ ಭಟ್ಟ ಕಲ್ಲಳ್ಳಿ, ಉಮ್ಮಚ್ಗಿ ಗ್ರಾಪಂ ಸದಸ್ಯರಾದ ಗ.ರಾ.ಭಟ್ಟ, ಕುಪ್ಪಯ್ಯ ಪೂಜಾರಿ, ಪಿಡಿಒ ಜಿ.ಜಿ. ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರಾದ ತಿಮ್ಮನ ಮನೆ ಕುಟುಂಬದವರು ದೇವಸ್ಥಾನದ ಮೇಲೆ ಬಿದ್ದ ಮರವನ್ನು ಕೂಡಲೇ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: Viral Video: ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮೂಡ್ನಲ್ಲಿ ಔಟ್ ನೀಡಿದ ಅಂಪೈರ್; ವಿಡಿಯೊ ವೈರಲ್