ಮಡಿಕೇರಿ: ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಬೆಳ್ಳಂಬೆಳಗ್ಗೆಯೇ ಬೆಂಕಿ ಆಕಸ್ಮಿಕ (Fire accident) ಸಂಭವಿಸಿ ಪೇಂಟ್ ಅಂಗಡಿಯೊಂದು ಭಸ್ಮವಾಗಿದೆ.
ಒಮ್ಮಿಂದೊಮ್ಮೆಗೇ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಪೇಂಟ್ ಅಂಗಡಿ ಧಗಧಗಿಸಿದೆ. ಬೇರು ಪೇಂಟ್ಸ್ ಎಂಬ ಹೆಸರಿನ ಅಂಗಡಿ ಇದಾಗಿದ್ದು, ಪ್ರಧಾನ ರಸ್ತೆಯಲ್ಲೇ ಇದೆ.
ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಇಲ್ಲಿ ಅಕ್ಕಪಕ್ಕದಲ್ಲಿ ಉದ್ದಕ್ಕೆ ಹತ್ತಾರು ಅಂಗಡಿಗಳಿದ್ದು, ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಹರಡದಂತೆ ತಡೆದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದರು.
ಪೇಂಟ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಲು ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕಿಟ್ ಆಗಿರಬಹುದು ಎಂದು ಶಂಕಿಸಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಪೇಂಟ್ ಅಗ್ನಿಗೆ ಆಹುತಿಯಾಗಿದೆ. ಪೇಂಟ್ ದಹನಶೀಲ ವಸ್ತುವಾಗಿದ್ದು, ಬೇಗನೆ ಬೆಂಕಿ ಹತ್ತಿಕೊಳ್ಳುತ್ತದೆ. ಈ ಕಾರಣಕ್ಕಾಗಿ ಬೆಂಕಿಯ ಕೆನ್ನಾಲಿಗೆಗಳು ಎತ್ತರಕ್ಕೆ ಹರಡಿದ್ದವು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆಲ್ಫ್ರೆಡ್ ನೊಬೆಲ್: ಅವನನ್ನು ಮರಣ ವ್ಯಾಪಾರಿ ಎಂದು ಬದುಕಿದ್ದಾಗಲೇ ಶೃದ್ಧಾಂಜಲಿ ಬರೆದಿತ್ತು ಪತ್ರಿಕೆ!