Site icon Vistara News

Fire accident | ಶಾರ್ಟ್‌ ಸರ್ಕಿಟ್‌ನಿಂದ ಸುಟ್ಟು ಕರಕಲಾದ ಮನೆ, 3 ಮೇಕೆ ಮರಿಗಳು ಸಜೀವ ದಹನ

fire at Laxmeshwara

ಗದಗ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆಯೊಂದು ಸುಟ್ಟು ಭಸ್ಮವಾಗಿದೆ. ಈ ಬೆಂಕಿಯಲ್ಲಿ ೩ ಮೇಕೆ ಮರಿಗಳು ಸಜೀವ ದಹನವಾಗಿವೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಇಬ್ರಾಹಿಂ ಸಾಬ್ ತಾಡಪತ್ರಿ ಎಂಬುವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ.

ಕುಟುಂಬಸ್ಥರು ಭಾನುವಾರ ಸಂಕ್ರಮಣಕ್ಕೆಂದು ಬೇರೆ ಊರಿಗೆ ಹೋಗಿದ್ದರು. ಸೋಮವಾರ ನಸುಕಿನ ಜಾವ ೫ ಗಂಟೆ ಸುಮಾರಿಗೆ ಮನೆಗೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ೩ ಮೇಕೆ ಮರಿ ಸಜೀವ ದಹನವಾಗಿದೆ. ಇನ್ನು ಲಕ್ಷಾಂತರ ರೂಪಾಯಿ ಮೌಲ್ಯದ ಅನೇಕ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ.

ನಂತರ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಸ್ಥಳಿಯರಿಂದ ಬೆಂಕಿ‌ ನಂದಿಸಲು ಮುಂದಾದರು. ನಂತರ ಸ್ಥಳಿಯರು‌ ಕುಟುಂಬಸ್ಥರಿಗೆ ಮಾಹಿತಿ‌ ನೀಡಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ಕುಟುಂಬಸ್ಥರಿಗೆ ಶಾಕ್ ಆದಂತಾಗಿದೆ. ಈ ಕುರಿತು ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಆಟೋ ರಿಕ್ಷಾಗೆ ಇನೋವಾ ಕಾರು ಡಿಕ್ಕಿ: 13 ವರ್ಷದ ಬಾಲಕ ಸ್ಥಳದಲ್ಲೇ ಸಾವು

Exit mobile version