ಬಳ್ಳಾರಿ: ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ (Fire Accident) ಅಂಗಡಿಗಳಿಗೆ ಬೆಂಕಿ ತಗುಲಿದೆ. ಬೆಂಕಿಗೆ ಕೆನ್ನಾಲಿಗೆ ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿವೆ.
ಅಂಗಡಿಗಳಲ್ಲಿದ್ದ 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಭಾನುವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ.
ಎಲೆಕ್ಟ್ರಿಕ್ ಶಾಪ್, ಬ್ಯಾಂಗಲ್ ಸ್ಟೋರ್, ಮೆಕ್ಯಾನಿಕ್ ಶಾಪ್, ಸೋಡಾ ಅಂಗಡಿಗೆ ಬೆಂಕಿ ತಗುಲಿದೆ. ಬೆಳಗಿನ ಜಾವ ಈ ಅವಘಡ ಸಂಭವಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: Robbery Case: ಬಂದೂಕು ತೋರಿಸಿ ತರೀಕೆರೆ ಮಾಜಿ ಶಾಸಕನ ಮನೆ ದರೋಡೆ; ಚಿನ್ನಾಭರಣ ಕದ್ದು ಪರಾರಿ
ಬೆಳಗ್ಗೆ ಅಂಗಡಿ ತೆರೆಯಲು ಬಂದು ನೋಡಿದಾಗ ಅಗ್ನಿ ಅವಘಡ ಸಂಭವಿಸಿರುವುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.