Site icon Vistara News

Fire Accident: ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಗೋಡೌನ್‌ನಲ್ಲಿ ಹೊತ್ತಿಉರಿದ ಸೀರಿಯಲ್‌ ಪ್ರಾಪರ್ಟಿಸ್‌

ಅಬ್ಬಯ್ಯನಾಯ್ಡು ಸ್ಟುಡಿಯೊ

#image_title

ಬೆಂಗಳೂರು: ಇಲ್ಲಿನ ಉತ್ತರಹಳ್ಳಿಯಲ್ಲಿ ಅಬ್ಬಯ್ಯ ನಾಯ್ಡು ಸ್ಟುಡಿಯೊದಲ್ಲಿ (Abbayya Naidu Studio) ಆಕಸ್ಮಿಕ ಅಗ್ನಿ ಅವಘಡ (Fire Accident) ಸಂಭವಿಸಿದೆ. ಕೆಲವು ಸೀರಿಯಲ್ ಹಾಗೂ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳ ಇದಾಗಿದ್ದು, ಖಾಸಗಿ ವಾಹಿನಿಯವರ ಸೆಟ್ ಪ್ರಾಪರ್ಟಿ ಇಟ್ಟಿದ್ದ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿ ಅವಘಡ

ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಾಪರ್ಟಿ ನಾಶವಾಗಿದೆ. ಶನಿವಾರ 12 ಗಂಟೆ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಎಲ್ಲೆಡೆ ಆವರಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಕಸ್ಮಿಕ ಅಗ್ನಿ ಅವಘಡ

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: Road Accident: ರಸ್ತೆ ದಾಟುತ್ತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ; ಭೀಕರ ಅಪಘಾತ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆ

Exit mobile version