Site icon Vistara News

Fire Accident: ರಾಯಚೂರಿನ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಹೆಚ್ಚಿದ ಆತಂಕ

#image_title

ರಾಯಚೂರು: ಇಲ್ಲಿನ ವಡ್ಲೂರು ಗ್ರಾಮದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದ್ದು, ಇಡೀ ಗೋದಾಮು ಸುಟ್ಟು ಹೋಗಿದೆ. ಕೈಗಾರಿಕಾ ಪ್ರದೇಶದ ಸುತ್ತ ದಟ್ಟವಾದ ಹೊಗೆ ಆವರಿಸಿದ್ದು, ಬೆಂಕಿ ಕೆನ್ನಾಲಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕೆಮಿಕಲ್ ಹೊತ್ತಿ ಉರಿದಿದೆ.

ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ತೊಡಗಿದ್ದು, ಸತತ ಮೂರು ಗಂಟೆಯ ನಂತರವೂ ನಿಯಂತ್ರಣಕ್ಕೆ ಬಂದಿಲ್ಲ. ಕೆಮಿಕಲ್ ಸೋರಿಕೆಯಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದ್ದು, ಅಕ್ಕಪಕ್ಕದ ಕಾರ್ಖಾನೆಗಳಿಗೆ ಬೆಂಕಿ ಹರಡುವ ಆತಂಕ ಶುರುವಾಗಿದೆ. ಅಗ್ನಿ ಅವಘಡದಿಂದಾಗಿ ಫ್ಯಾಕ್ಟರಿ ಒಳಗೆ ಇರುವ ಗ್ಯಾಸ್‌ ಲೀಕ್‌ ಆಗುತ್ತಿದ್ದು, ಸ್ಥಳಕ್ಕೆ 5 ಅಗ್ನಿಶಾಮಕ ದಳ ಬಂದಿದ್ದು, ಸತತವಾಗಿ ಕಾರ್ಯಾಚರಣೆ ನಡೆಸುತ್ತಿದೆ.

ವ್ಯಾಪಕವಾಗಿ ಬೆಂಕಿ ಹಬ್ಬಿದ ಕಾರಣದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಕಾರ್ಖಾನೆಯ ಸುತ್ತಲಿನ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮನೆ, ಗುಡಿಸಲಿಗೂ ಬೆಂಕಿ ಹಬ್ಬುವ ಆತಂಕ ಇದೆ. ಇತ್ತ ಕಾರ್ಖಾನೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾವು-ನೋವುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಚಲಿಸುವಾಗಲೇ ಹೊತ್ತಿ ಉರಿದ ವೋಲ್ವೋ ಬಸ್‌, ಎಲ್ಲ 30 ಪ್ರಯಾಣಿಕರು ಸೇಫ್‌

ಮಂಡ್ಯ: ಮೈಸೂರು- ಬೆಂಗಳೂರು ನೂತನ ದಶಪಥ ಹೆದ್ದಾರಿಯಲ್ಲಿ ಖಾಸಗಿ ವೋಲ್ವೊ ಬಸ್‌ ಒಂದು ಚಲಿಸುವಾಗಲೇ ಹೊತ್ತಿ ಉರಿದ ಘಟನೆ ಶನಿವಾರ ಸಂಭವಿಸಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿದೆ.

ಮೈ-ಬೆಂ ನೂತನ ದಶಪಥ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಒಮ್ಮಿಂದೊಮ್ಮೆಗೇ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಬೊಬ್ಬೆ ಹೊಡೆದು ಬಸ್ಸನ್ನು ನಿಲ್ಲಿಸಿದರು. ಇದರಿಂದಾಗಿ ಕೂಡಲೇ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಸಲು ಸಾಧ್ಯವಾಯಿತು.

ಇದನ್ನೂ ಓದಿ: IPL‌ Betting: ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

ಬಸ್ಸಿನಿಂದ ಪ್ರಯಾಣಿಕರು ಇಳಿದು, ಕೆಲವರು ತಮ್ಮ ತಮ್ಮ ಲಗೇಜ್‌ಗಳನ್ನು ಇಳಿಸಿದರು. ಆದರೆ, ಕೆಲವು ಲಗೇಜ್‌ಗಳು ಸುಟ್ಟುಹೋಗಿವೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಖಾಸಗಿ ಬಸ್ ನಲ್ಲಿ 30 ಜನ ಪ್ರಯಾಣಿಕರು ಇದ್ದರು. ಅವರನ್ನೆಲ್ಲ ಇಳಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Exit mobile version