ಮೈಸೂರು/ಚಿಕ್ಕಮಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ಎಕರೆಗಟ್ಟಲೇ ಅರಣ್ಯ ಪ್ರದೇಶ ಬೆಂಕಿಗಾಹುತಿ (Fire Accident) ಆಗಿದೆ. ಮೈಸೂರಿನ ಲಲಿತಾದ್ರಿಪುರ ಭಾಗದಲ್ಲಿರುವ ಚಾಮುಂಡಿಬೆಟ್ಟದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿತ್ತು.
ಮೊದಲಿಗೆ ವ್ಯೂ ಪಾಯಿಂಟ್ ಬಳಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಎಲ್ಲೆಡೆ ವ್ಯಾಪಿಸಿದ್ದರಿಂದ ಮರಗಿಡಗಳು ಸುಟ್ಟು ಕರಕಲಾಗಿವೆ. ರಸ್ತೆ ತುದಿಯವರೆಗೂ ಬೆಂಕಿ ವ್ಯಾಪಿಸಿದರಿಂದ ಭಾನುವಾರ ಕೆಲಕಾಲ ವಾಹನ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು.
ದುಷ್ಕರ್ಮಿಗಳು ಕಾಡಿಗೆ ಬೆಂಕಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: Karnataka Election : ಶಾಫಿ ಬೆಳ್ಳಾರೆ ಸ್ಪರ್ಧೆಗೆ ಪ್ರವೀಣ್ ನೆಟ್ಟಾರು ಮನೆಯವರ ವಿರೋಧ
ತೋಟಕ್ಕೆ ಬಿದ್ದ ಆಕಸ್ಮಿಕ ಬೆಂಕಿ
ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ರೈತರ ಕಣ್ಣೆದುರೇ ತೋಟವೊಂದು ಸುಟ್ಟು ಹೋಗಿದೆ. ನೋಡ ನೋಡುತ್ತಿದ್ದಂತೆ 3 ಎಕರೆ ತೋಟ ಬೆಂಕಿಗಾಹುತಿ ಆಗಿದೆ. ಗ್ರಾಮದ ರೈತ ಬಸವರಾಜಪ್ಪ ಹಾಗೂ ಕಲ್ಲೇಶಪ್ಪ ತೋಟ ಸುಟ್ಟು ಬೂದಿ ಆಗಿದೆ. ತೋಟದಲ್ಲಿದ್ದ ಅಡಿಕೆ, ತೆಂಗು, ಬಾಳೆ, ಸಪೋಟ, ಸೀಬೆ ಬೆಳೆ ನಾಶವಾಗಿದೆ. ಇಬ್ಬರು ರೈತರೂ ಕಂಗಾಲಾಗಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ