Site icon Vistara News

Fire Accident | ಕೊಟ್ಟಿಗೆಯಲ್ಲಿ ಅಗ್ನಿ ಅವಘಡ; ಬೆಂಕಿಯಲ್ಲಿ ಬೆಂದು ಎರಡು ಎತ್ತುಗಳ ದಾರುಣ ಸಾವು

ಚಾಮರಾಜನಗರ: ಇಲ್ಲಿನ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ (Fire Accident) ಬಿದ್ದು ಎರಡು ಎತ್ತುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ರೈತ ಸಿದ್ದರಾಜು ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ. ಕೊಟ್ಟಿಗೆ ಪಕ್ಕದಲ್ಲಿದ್ದ ಹುಲ್ಲಿನ ಮೆದೆಗೆ ಬೆಂಕಿ ಬಿದ್ದಿದ್ದು, ಬಳಿಕ ಅದು ಕೊಟ್ಟಿಗೆಗೂ ಕ್ಷಣಾರ್ಧದಲ್ಲಿಯೇ ವ್ಯಾಪಿಸಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಬೆಂಕಿಯ ಕಿನ್ನಾಲೆಗೆ ಬಲಿಯಾಗಿವೆ. ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಿ ಹಾಕಿದ್ದರಿಂದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಆಗದೆ ಪರಾದಾಡಿವೆ.

ಇತ್ತ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ಎತ್ತುಗಳನ್ನು ಕಾಪಾಡಲು ಆಗದೇ ಮಾಲೀಕರು ಪರದಾಡಿದ್ದಾರೆ. ಎತ್ತುಗಳು ಅಲ್ಲೆ ಒದ್ದಾಡಿ ಪ್ರಾಣ ಬಿಟ್ಟಿದ್ದು, ಮಾಲೀಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೆದುರೇ ಜೀವಂತ ಎತ್ತುಗಳು ಸುಟ್ಟು ಕರಕಲು ಆದವು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Suicide Case : ಗೌರಿಬಿದನೂರಿನಲ್ಲಿ ರೈಲಿಗೆ ಸಿಲುಕಿ ಮೂವರ ಸಾವು; ಆತ್ಮಹತ್ಯೆಗೆ ಶರಣಾಯ್ತಾ ಒಂದೇ ಕುಟುಂಬ?

Exit mobile version