Site icon Vistara News

Fire Accident: ಕೊಪ್ಪಳದಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಉಡುಪಿಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ವೆಹಿಕಲ್‌

#image_title

ಕೊಪ್ಪಳ/ಉಡುಪಿ: ಬೇಸಿಗೆ ಶುರುವಾಗುತ್ತಿದ್ದಂತೆಯೇ ಅಗ್ನಿ ಅವಘಡಗಳು ಹೆಚ್ಚಾಗುತ್ತಿದೆ. ಆಕಸ್ಮಿಕ ಅಗ್ನಿ ಅವಘಡದಿಂದಾಗಿ (Fire Accident) ಕೊಪ್ಪಳದ ಕುವೆಂಪು ನಗರದಲ್ಲಿ ಮನೆಯೊಂದು ಬೆಂಕಿಗಾಹುತಿ ಆಗಿದೆ.

ಸಿಲಿಂಡರ್‌ ಗ್ಯಾಸ್‌ ಸೋರಿಕೆಯಿಂದಾಗಿ ಕಾಣಿಸಿಕೊಂಡ ಬೆಂಕಿ

ಆನಂದ್ ಎಂಬುವವರ ಮನೆಯಲ್ಲಿ ಸಿಲಿಂಡರ್‌ (Bengaluru Cylinder Blast) ಸ್ಫೋಟಗೊಂಡಿದೆ. ಬಿಸಿಲಿನ ತಾಪಕ್ಕೆ ಸಿಲಿಂಡರ್ ಸೋರಿಕೆ ಆಗಿದ್ದು ಬೆಂಕಿ ದುರಂತ ಸಂಭವಿಸಿದೆ. ಇತ್ತ ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ.

ಸಿಲಿಂಡರ್‌ ಸ್ಫೋಟಗೊಂಡು ಬೆಂಕಿಗಾಹುತಿಯಾದ ಮನೆ

ಅದೃಷ್ಟವಶಾತ್‌ ಮನೆಯಲ್ಲಿ ಯಾರು ಇಲ್ಲದೆ ಇರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಪ್ಪಳ ನಗರಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

ಕ್ಷಣಾರ್ಧದಲ್ಲೆ ಉರಿದು ಭಸ್ಮವಾದ ಎಲೆಕ್ಟ್ರಿಕ್ ಸ್ಕೂಟರ್

ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಹೊತ್ತಿ ಉರಿದ ಘಟನೆ ಉಡುಪಿಯ ಶಂಕರಪುರದ ಅರ್ಶಿಕಟ್ಟೆಯಲ್ಲಿ ನಡೆದಿದೆ. ಜೋಸೆಫ್ ಲೋಬೋ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ನಂತರ ಪೂರ್ತಿ ಆವರಿಸಿ ಕ್ಷಣಾರ್ಧದಲ್ಲೆ ಹೊತ್ತಿ ಉರಿದಿದೆ.

ಹೊತ್ತಿ ಉರಿದ ಎಲೆಕ್ಟ್ರಿಕ್‌ ಸ್ಕೂಟರ್‌

ಜೋಸೆಫ್ ಒಂದು ವರ್ಷದ ಹಿಂದಷ್ಟೇ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿದ್ದರು. ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಸುಟ್ಟು ಕರಕಲಾದ ಸ್ಕೂಟರ್‌

ಇತ್ತ ಈ ಆಕಸ್ಮಿಕ ಅಗ್ನಿಅವಘಡದಿಂದಾಗಿ ಸ್ಕೂಟರ್‌ ಅಕ್ಕಪಕ್ಕದಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿ ಆಗಿದೆ. ಅಂಗಳದಲ್ಲಿ ಪಕ್ಷಿಗಳನ್ನು ಪಂಜರದೊಳಗೆ ನೇತು ಹಾಕಲಾಗಿತ್ತು, ಅವುಗಳಿಗೂ ಬೆಂಕಿ ತಗುಲಿ ಕರಕಲಾಗಿವೆ.

ಇದನ್ನೂ ಓದಿ: Wild Animals Attack: ರಾಮನಗರದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಕರಡಿ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಬೆಂಕಿಗಾಹುತಿಯಾದ ಆಟಿಕೆ ಅಂಗಡಿ

ಆಟಿಕೆ ಅಂಗಡಿಯಲ್ಲಿ ಬೆಂಕಿ ಅವಘಡ

ಬೆಂಗಳೂರಿನ ವಿವೇಕನಗರ ಮುಖ್ಯರಸ್ತೆಯಲ್ಲಿರುವ ಆಟಿಕೆ ಅಂಗಡಿಯೊಂದರಲ್ಲಿ ಬೆಂಕಿ ಅವಘಡದಿಂದಾಗಿ ಸಾವಿರಾರು ರೂಪಾಯಿ ಆಟಿಕೆಗಳು ಬೆಂಕಿಗಾಹುತಿ ಆಗಿವೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಈ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದು ಬಂದಿದೆ. ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version