Site icon Vistara News

Fire Accident: ಅರಣ್ಯಕ್ಕೆ ಕೊಳ್ಳಿ ಇಟ್ಟ ದುಷ್ಕರ್ಮಿಯ ಬಂಧನ; ಮತ್ತಿಬ್ಬರಿಗಾಗಿ ಪೊಲೀಸರ ಹುಡುಕಾಟ

Police arrest man who set forest on fire

Police arrest man who set forest on fire

ಚಿಕ್ಕಮಗಳೂರು: ಚಿಕ್ಕಮಗಳೂರಿನ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳ ಗುಂಪುವೊಂದು ಕಳೆದ ಭಾನುವಾರ ರಾತ್ರಿ ಬೆಂಕಿ (Fire Accident) ಹಾಕಿದ್ದರು. ಅರಣ್ಯಕ್ಕೆ ಬೆಂಕಿ ಹಾಕಿದ ಒಬ್ಬನನ್ನು ಬಂಧಿಸಿದ್ದರೆ, ನಾಪತ್ತೆ ಆಗಿರುವ ಮತ್ತಿಬ್ಬರಿಗಾಗಿ ಬಾಳೆಹೊನ್ನೂರು ಅರಣ್ಯಾಧಿಕಾರಿ ಹುಡುಕಾಟ ನಡೆಸಿದ್ದಾರೆ. ರಘು ಬಂಧಿತ ಆರೋಪಿ ಆಗಿದ್ದು, ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾದ ಕಿಡಿಗೇಡಿಗಳಾಗಿದ್ದಾರೆ.

ಬೆಂಕಿ ನಂದಿಸುತ್ತಿರುವ ಚಿತ್ರಣ

ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ಪರಿಣಾಮ ಸುಮಾರು ಹತ್ತಾರು ಎಕರೆ ಅರಣ್ಯ ಪ್ರದೇಶವು ಸುಟ್ಟು ಭಸ್ಮವಾಗಿತ್ತು. ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಆವರಿಸಿತ್ತು. ಬೆಂಕಿ ನಂದಿಸಲು ತಡರಾತ್ರಿವರೆಗೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

ಹೊತ್ತಿ ಉರಿದ ಅರಣ್ಯಾಧಿಕಾರಿಗಳ ಬೈಕ್‌ಗಳು

ಧಗ ಧಗ ಹೊತ್ತಿ ಉರಿದ ಬೈಕ್‌ಗಳು

ಕಾಡ್ಗಿಚ್ಚು ಆರಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್‌ಗಳು ಸುಟ್ಟು ಭಸ್ಮವಾಗಿದೆ. ಚಿಕ್ಕಮಗಳೂರು ತಾಲೂಕಿನ ಸಿಂದಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಬೈಕ್‌ನಲ್ಲಿ ಹೋಗಿದ್ದರು. ಈ ವೇಳೆ ಗಾಳಿಯ ರಭಸಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ಮೂರು ಬೈಕ್‌ಗಳು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಗಾಳಿಯಲ್ಲಿ ಬಂದ ಬೆಂಕಿಯ ಕಿಡಿಯಿಂದ ಮೂರು ಬೈಕ್‌ಗಳು ಬೆಂಕಿಗಾಹುತಿ ಆಗಿವೆ.

ಮೇವಿನ ಬಣವೆಗೆ ಬೆಂಕಿ

ಕೊಪ್ಪಳದಲ್ಲಿ ಸುಟ್ಟು ಬೂದಿಯಾದ ಮೇವಿನ ಬಣವೆ

ಅಗ್ನಿ ಅವಘಡದಿಂದ ಮೇವಿನ ಬಣವೆಯು ಸುಟ್ಟು ಬೂದಿಯಾದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ನಡೆದಿದೆ. ಜಾನುವಾರುಗಳಿಗೆಂದು ಮೇವು ಮತ್ತು ಹೊಟ್ಟನ್ನು ಜಗದೀಶ ಚಟ್ಟಿ ಎಂಬುವವರು ಸಂಗ್ರಹಿಸಿದ್ದರು. ಈ ಅಗ್ನಿ ಅವಘಡದಿಂದಾಗಿ ಸುಮಾರು 1 ಲಕ್ಷ ರೂಪಾಯಿ ಮೌಲ್ಯದಷ್ಟು ನಷ್ಟವುಂಟಾಗಿದೆ.

ಬೆಂಕಿಗಾಹುತಿಯಾದ ಬಣವೆ

ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಎರಡು ಬಣವೆ ಬೆಂಕಿಗಾಹುತಿ

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಉಂಟಾಗಿದ್ದು, ಒಣಹುಲ್ಲಿನ ಮೇವಿನ ಎರಡು ಬಣವೆ ಬೆಂಕಿಗಾಹುತಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ವಿಶಾಲ್‌ ಪಾಟೀಲ ಎಂಬುವವರು ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿಟ್ಟಿದ್ದರು.

ಇದನ್ನೂ ಓದಿ:Loco Pilot: ಇನ್ನೇನು ರೈಲು ಹೊರಡುವಾಗಲೇ ಹಳಿ ದಾಟುತ್ತಿದ್ದ ವೃದ್ಧ ಎಡವಿ ಬಿದ್ದ; ಮುಂದೇನಾಯಿತು?

ಜಮೀನಿನ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಸುಮಾರು 30 ಸಾವಿರ ರೂಪಾಯಿ ಮೌಲ್ಯದಷ್ಟು ಮೇವು ಬೆಂಕಿಗಾಹುತಿ ಆಗಿದೆ. ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version