Site icon Vistara News

Fire Accident: ತುಮಕೂರು ವಿವಿ ಹಾಸ್ಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌; ಧಗಧಗನೆ ಹೊತ್ತಿ ಉರಿದ ಹಾಸಿಗೆಗಳು

#image_title

ತುಮಕೂರು: ಇಲ್ಲಿನ ತುಮಕೂರು ವಿಶ್ವವಿದ್ಯಾಲಯದ ಕ್ರೀಡಾ ಹಾಸ್ಟೆಲ್ ಕಟ್ಟಡದಲ್ಲಿ ಶಾರ್ಟ್‌ ಸರ್ಕ್ಯೂಟ್‌ (Fire Accident ) ಸಂಭವಿಸಿದ ಘಟನೆ ಸೋಮವಾರ (ಫೆ.6) ನಡೆದಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಹಾಸ್ಟೆಲ್‌ನಲ್ಲಿದ್ದ ಹಾಸಿಗೆಗಳೆಲ್ಲ ಧಗಧಗನೆ ಹೊತ್ತಿ ಉರಿದಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಬೆಂಕಿಯಿಂದಾಗಿ ದಟ್ಟವಾಗಿ ಹೊಗೆ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹಾಸ್ಟೆಲ್‌ ವಿದ್ಯಾರ್ಥಿಗಳು ಹೊರಗೆ ಓಡಿ ಬಂದಿದ್ದಾರೆ.

ಇದನ್ನೂ ಓದಿ: Fraud Case: ಬಡಪಾಯಿಗಳ ಚೀಟಿ ಹಣ ಗುಳುಂ ಮಾಡಿ ದಂಪತಿ ಪರಾರಿ; ಠಾಣೆ ಮೆಟ್ಟಿಲೇರಿದ ಮಹಿಳೆಯರು

ಈ ಅವಘಡದಲ್ಲಿ ಹಾಸ್ಟೆಲ್‌ನಲ್ಲಿದ್ದ ವಸ್ತುಗಳಿಗೆ ಮಾತ್ರ ಹಾನಿಯಾಗಿದ್ದು, ಅದೃಷ್ಟವಾಶತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ಎನ್ಇಪಿಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version