Site icon Vistara News

Fire Accident: ಮೈಸೂರಿನಲ್ಲಿ ವಿದ್ಯುತ್‌ ತಂತಿ ತಗುಲಿ ಕಬ್ಬಿನ ಗದ್ದೆ ನಾಶ; ಕೊಪ್ಪಳದಲ್ಲಿ ಕಟಾವಿಗೆ ಬಂದಿದ್ದ ಬೆಳೆ ಬೆಂಕಿಗಾಹುತಿ

#image_title

ಮೈಸೂರು/ಕೊಪ್ಪಳ: ಮೈಸೂರಿನ ತಿ.ನರಸೀಪುರ ತಾಲೂಕಿನ ಹ್ಯಾಕನೂರು ಗ್ರಾಮದಲ್ಲಿ ವಿದ್ಯುತ್ ತಂತಿ (Fire Accident) ತಗುಲಿ 3 ಎಕರೆ ಕಬ್ಬಿನ ಗದ್ದೆ ಸಂಪೂರ್ಣ ನಾಶವಾಗಿದೆ. ಹ್ಯಾಕನೂರು ಗ್ರಾಮದ ಸುಂದ್ರಮ್ಮ ಎಂಬ ರೈತ ಮಹಿಳೆಗೆ ಸೇರಿದ ಕಬ್ಬಿನ ಗದ್ದೆ ಬೆಂಕಿಗೆ ಸುಟ್ಟು ಕರಕಲಾಗಿದೆ.

ಬಿಸಿಲಿನ ತಾಪಕ್ಕೆ ಕ್ಷಣ ಮಾತ್ರದಲ್ಲಿ ಕಬ್ಬುಗಳು ಸುಟ್ಟು ಬೂದಿ ಆಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಆದರೆ, ಒಮ್ಮೆಲೆ ಹೊತ್ತಿ ಉರಿದಿದ್ದರಿಂದ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸವೇ ಪಡಬೇಕಾಯಿತು. ಈ ಘಟನೆಯಿಂದ ದಿಕ್ಕು ತೋಚದೆ ರೈತ ಮಹಿಳೆ ಸುಂದ್ರಮ್ಮ ಕಂಗಲಾಗಿದ್ದು, ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಕೈಗೆ ಬಂದ ತುತ್ತು ಬೆಂಕಿ ಪಾಲು

ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಬೆಳೆಯು ಬೆಂಕಿಗೆ ಆಹುತಿಯಾದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಎಂ. ಬಸಾಪುರ ಬಳಿ ನಡೆದಿದೆ. ಇಳಕಲ್ ಮೂಲದ ಚನ್ನಬಸಪ್ಪ ಲೆಕ್ಕಿಹಾಳ, ಮನೋಹರ ಕರವಾ ಎಂಬುವವರಿಗೆ ಸೇರಿದ ತೋಟದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಸುಮಾರು 4 ಎಕರೆಯಲ್ಲಿ ಬೆಳೆದಿದ್ದ ಹೆಬ್ಬೇವು, ಮಹಾಗನಿ, ಸಪೋಟಾ, ಮಿಡಿ‌ಮಾವು ನಾಶವಾಗಿದೆ. ಕಟಾವು ಹಂತದಲ್ಲಿದ್ದ ಸಪೋಟಾ ಹಾಗೂ ಮಿಡಿಮಾವು ಎಲ್ಲ ಬೆಂಕಿ ಪಾಲಾಗಿದ್ದು, ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ತೋಟದ ಬದುವಿನಗುಂಟವರೆಗೆ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕೆಲಸ ಆಗುತ್ತಿದೆ.

ಇದನ್ನೂ ಓದಿ: Road accident : ತುಮಕೂರಿನ ಶಿರಾ, ಹೊಸಪೇಟೆಯಲ್ಲಿ ಭೀಕರ ಅಪಘಾತ; ಮೂವರು ಬೈಕ್‌ ಸವಾರರು ದಾರುಣ ಮೃತ್ಯು

Exit mobile version