ಚಿಕ್ಕಬಳ್ಳಾಪುರ: ಇಲ್ಲಿನ ನಂದಿ ಬೆಟ್ಟಕ್ಕೆ ವೀಕೆಂಡ್ ಟ್ರಿಪ್‌ಗೆ ಬಂದಿದ್ದ ಪ್ರವಾಸಿಗರೊಬ್ಬರ ಕಾರಿನ ಎಂಜಿನ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಲೇ ಸುಟ್ಟು (Fire Accident) ಕರಕಲಾಗಿದೆ.
ಬೆಟ್ಟ ಹತ್ತುವಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಿಂದ ಹೊಗೆ ಬರುತ್ತಿದ್ದರೂ ಬೆಟ್ಟ ಹತ್ತಿಸಲು ಕಾರು ಚಾಲಕ ಮುಂದಾಗಿದ್ದಾರೆ. ಈ ವೇಳೆ ಬೈಕ್ ಸವಾರರೊಬ್ಬರು ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದು, ತಕ್ಷಣ ಎಚ್ಚೆತ್ತುಕೊಂಡ ಕಾರಿನಲ್ಲಿದ್ದವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಬರುವಷ್ಟರಲ್ಲಿ ಫೋರ್ಡ್ ಕಂಪನಿಯ ಫೋರ್ಡ್ ಫಿಗೋ ಕಾರು ಸಂಪೂರ್ಣ ಸುಟ್ಟು ಕರಕಲಾಯಿತು. ಇದು ಬೆಂಗಳೂರು ಮೂಲದ ಶರತ್ ಎಂಬುವರಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ.