ಯಾದಗಿರಿ: ವಡಗೇರ ತಾಲೂಕಿನ ಕೊನಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗದ ಹುಲ್ಲು ಸುಡುವ ವೇಳೆ ಅರಣ್ಯ ಇಲಾಖೆಯ ದಿನಗೂಲಿ ನೌಕರರೊಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ (Fire accident). ಯಾಕೂಬ್ ಸಾಬ್(58) ಮೃತ ವ್ಯಕ್ತಿ.
ಯಾಕೂಬ್ ಸಾಬ್ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೆರೆಗೆ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರು.
ಅರಣ್ಯದಲ್ಲಿ ಬೆಳೆದಿರುವ ಒಣ ಹುಲ್ಲು ಕತ್ತರಿಸಿ ಒಂದು ಕಡೆ ಶೇಖರಿಸಿದ್ದ ಯಾಕೂಬ್ ಭಾನುವಾರ ರಾತ್ರಿ ಅಧಿಕಾರಿಗಳ ಸೂಚನೆಯಂತೆ ಒಣ ಹುಲ್ಲು ಸುಡಲು ಮುಂದಾಗಿದ್ದರು. ಆಗ ಏಕಾಏಕಿ ದಟ್ಟ ಹೊಗೆ ಆವರಿಸಿ ಬೆಂಕಿ ಹತ್ತಿಕೊಂಡಿದೆ. ಅದರ ನಡುವೆ ಸಿಲುಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳಕ್ಕೆ ವಡಗೇರ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Santro Ravi case | ಮಹಿಳಾ ವೈದ್ಯರನ್ನೂ ದುರ್ಬಳಕೆ ಮಾಡಿಕೊಳ್ತಿದ್ದ ಸ್ಯಾಂಟ್ರೋ: ಒಬ್ಬ ಡಾಕ್ಟರ್ರಿಂದ ಐದು ಜನರ ಗರ್ಭಪಾತ!