Site icon Vistara News

Fire at police station |ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಂಕಿ ಅನಾಹುತ, ಫೈಲ್‌ಗಳೆಲ್ಲ ಸುಟ್ಟು ಬೂದಿ!

wilson garden station fire
ವಿಲ್ಸನ್‌ ಗಾರ್ಡನ್‌ ಸ್ಟೇಷನ್‌

ಬೆಂಗಳೂರು: ರಾಜಧಾನಿಯ ಪ್ರಮುಖ ಠಾಣೆಗಳಲ್ಲಿ ಒಂದಾದ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ.
ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಬೆಳಗ್ಗಿನ ಹೊತ್ತು ನಡೆದಿರುವ ಈ ಘಟನೆಯಲ್ಲಿ ಕೇಸ್‌ ಫೈಲ್‌ಗಳು ಮತ್ತು ಆರೋಪಿಗಳಿಂದ ಜಪ್ತಿ ಮಾಡಲಾದ ಹಲವು ವಸ್ತುಗಳು ನಾಶವಾಗಿವೆ. ಯಾವುದೇ ಸಿಬ್ಬಂದಿಗೆ ತೊಂದರೆಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ | ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಬೆಂಕಿ, ಬಾನೆತ್ತರಕ್ಕೆ ಹೊಗೆ: ಫುಟ್‌ ವೇರ್‌ ಕಂಪನಿಯಲ್ಲಿ ಅಗ್ನಿ ಅನಾಹುತ, ನಂದಿಸಲು ಹರಸಾಹಸ

Exit mobile version