ಹುಬ್ಬಳ್ಳಿ: ಇಲ್ಲಿನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಇಂದು ಮುಂಜಾನೆ ಖಾಸಗಿ ಬಸ್ವೊಂದು ಬೆಂಕಿಯಿಂದ ಹೊತ್ತಿ ಉರಿದಿದೆ. ರೇಶ್ಮಾ ಟ್ರಾವೆಲ್ಸ್‌ಗೆ ಸೇರಿ ಸುಖವಿಹಾರಿ ಎಂಬ ಖಾಸಗಿ ಬಸ್ ಮುಂಬಯಿಯಿಂದ ಮಂಗಳೂರಿನೆಡೆಗೆ ಚಲಿಸುತ್ತಿತ್ತು. ಹುಬ್ಬಳ್ಳಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸಾಗುತ್ತಿದ್ದಾಗ, ಟೈಯರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು.
ಟೈರ್ ಸ್ಫೋಟಗೊಂಡು ಚಿಕ್ಕ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಚಾಲಕ ಎಚ್ಚೆತ್ತು ಎಲ್ಲ ಪ್ರಯಾಣಿಕರನ್ನೂ ಕೆಳಗೆ ಇಳಿಸಿದ್ದ. ಹೀಗಾಗಿ ಯಾರದ್ದೂ ಪ್ರಾಣಹಾನಿಯಾಗಿಲ್ಲ. ಆದರೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: Ev Scooter: ಬೆಂಕಿ ಅವಘಡಗಳಿಗೆ ಬ್ಯಾಟರಿ ಬಿಸಿಯಾಗುವುದೇ ಕಾರಣ