ದೇವನಹಳ್ಳಿ/ಮಹದೇವಪುರ: ದೊಡ್ಡ ಬಳ್ಳಾಪುರ ಮತ್ತು ಮಹದೇವಪುರದಲ್ಲಿ ಸಂಭವಿಸಿದ ಎರಡು ಅಗ್ನಿ ದುರಂತಗಳಲ್ಲಿ ಒಂದು ಕೆಮಿಕಲ್ ಫ್ಯಾಕ್ಟರಿ ಮತ್ತೊಂದು ಪುಟ್‌ವೇರ್ ತಯಾರಿಕಾದ ಗೋದಾಮು ಸುಟ್ಟು ಭಸ್ಮವಾಗಿದೆ.
ದೊಡ್ಡಬಳ್ಳಾಪುರದಲ್ಲಿ
ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿ ಕೈಗಾರಿಕಾ ಪ್ರದೇಶದಲ್ಲಿರುವ ರೆಸೋನೆನ್ಸ್ ಲ್ಯಾಬೊರೇಟರೀಸ್ ಪ್ರೈ ಲಿಮಿಟೆಡ್‌ನ ಕೆಮಿಕಲ್ ಗೋದಾಮಿನಲ್ಲಿ ಸೋಮವಾರ ಮಧ್ಯಾಹ್ನದ ಹೊತ್ತು ಆಕಸ್ಮಿಕ ಬೆಂಕಿ ಹುಟ್ಟಿಕೊಂಡು ಗೋದಾಮು ಸುಟ್ಟುಹೋಗಿದೆ. ಎಲ್ಲೋ ಹುಟ್ಟಿಕೊಂಡ ಬೆಂಕಿ ಇಡೀ ಗೋದಾಮನ್ನೇ ಸುಟ್ಟು ಕರಕಲು ಮಾಡಿದೆ. ಇಲ್ಲಿಂದ ಎದ್ದ ಬೆಂಕಿಯಿಂದ ಉಂಟಾದ ಹೊಗೆ ಬಾನೆತ್ತರಕ್ಕೆ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.
ತಹಸೀಲ್ದಾರ್ ಮೋಹನ ಕುಮಾರಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಮುನಿಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ಮೂರುಗಂಟೆಗಳಿಂದ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.
ಮಹದೇವಪುರದಲ್ಲಿ
ಮಹದೇವಪುರದ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿನ ಮಹದೇವಪುರದ ಎನ್.ಜಿ.ಇ.ಎಫ್ ಇಂಡಿಲ್ ಎಸ್ಟೇಟ್ ನಲ್ಲಿರುವ ರೀಗನ್ ಬೋಗನ್ ಫುಟ್ ವೇರ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ನವೀನ್ ಮತ್ತು ರಾಜೇಶ್ ಎಂಬವರಿಗೆ ಸೇರಿದ ಕಂಪನಿ ಇದಾಗಿದೆ.