Site icon Vistara News

Fire tragedy : ಏಕಾಏಕಿ ಹುಟ್ಟಿಕೊಂಡ ಬೆಂಕಿ ಇಡೀ ತೋಟಕ್ಕೆ ಹರಡಿ 600 ಅಡಿಕೆ ಗಿಡಗಳು ಸುಟ್ಟು ಭಸ್ಮ

Shivamogga fire tragedy

#image_title

ಹೊಸನಗರ: ತಾಲೂಕಿನ ಕಾಳಿಕಾಪುರ ಗ್ರಾಮದ ಬಿ. ಸೀನ ಪೂಜಾರಿ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ಬೆಂಕಿ ತಗುಲಿ (Fire tragedy) ಸುಮಾರು 600 ಅಡಿಕೆ ಮರಗಳು ಸುಟ್ಟು ಕರಕಲಾಗಿವೆ. ಒಂದು ಮರಕ್ಕೆ ಹೇಗೋ ಹತ್ತಿದ ಬೆಂಕಿ ಗಾಳಿಗೆ ಎಲ್ಲೆಡೆ ಹರಡಿ ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ.

ಸೀನ ಪೂಜಾರಿಯವರು ತಮ್ಮ ಸ್ವಂತ ಜಾಗದಲ್ಲಿ ಸುಮಾರು 600 ಅಡಿಕೆ ಸಸಿಗಳನ್ನು ನೆಟ್ಟಿದ್ದು ಅದಕ್ಕೆ ಡ್ರಿಪ್ ಪೈಪ್ ಹಾಕಲಾಗಿತ್ತು. ಏಕಾಏಕಿ ಗಾಳಿಯ ಮೂಲಕ ಬೆಂಕಿ ತಗಲಿದ್ದರಿಂದ 600 ಅಡಿಕೆ ಮರಗಳು ಸುಟ್ಟು ಕರಕಲಾಗುವ ಜೊತೆಗೆ ನೀರಿನ ಸೌಲಭ್ಯಕ್ಕಾಗಿ ಮಾಡಿದ ಡ್ರಿಪ್ ಪೈಪ್ ಸಹ ಸುಟ್ಟು ಹೋಗಿದೆ. ಸುಮಾರು ಅಂದಾಜು 2 ಲಕ್ಷ ರೂ.ನಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

ತೋಟದಲ್ಲಿದ್ದ 600ಕ್ಕೂ ಹೆಚ್ಚು ಅಡಕೆ, ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.

ಹೊಸನಗರ ಆಗ್ನಿ ಶಾಮಕ ದಳದ ಸಿಬ್ಬಂದಿಯವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟು ಹೊತ್ತಿಗೆ 600 ಮರಗಳು ಸುಟ್ಟು ಹೋಗಿವೆ.

ಗ್ರಾಮಾಡಳಿತಾಧಿಕಾರಿ ಕೌಶಿಕ್ ಭೇಟಿ

ವಿಷಯ ತಿಳಿಯುತ್ತಿದ್ದಂತೆ ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ ಗ್ರಾಮ ಸಹಾಯಕ ಅಶೋಕ್‌ರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅನಾಹುತವಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹಾಗೂ ಅನಾವೃಷ್ಠಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಇದನ್ನೂ ಓದಿ : Cow slaughter : ತನ್ನನ್ನು ಕಸಾಯಿ ಖಾನೆಗೆ ಎಳೆದುತಂದ ಯುವಕನನ್ನು ತಿವಿದು ಕೊಂದ ಎಮ್ಮೆ

Exit mobile version