Site icon Vistara News

Fire tragedy | ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಅಗ್ನಿ ಅವಘಡ: ಆತಂಕದಿಂದ ಓಡಿದ ಪ್ರಯಾಣಿಕರು

Majestic bus station

ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಅಗ್ನಿ ಅವಘಡ ಸಂಭವಿಸಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಟರ್ಮಿನಲ್‌ ೧ರ ಪವರ್‌ ರೂಮ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತು.

ಟರ್ಮಿನಲ್ ೧ರ ಪವರ್ ರೂಂ ನಲ್ಲಿ ಹೊತ್ತಿಕೊಳ್ಳುತ್ತಿದ್ದಂತೆಯೇ ಪ್ರಯಾಣಿಕರು ಆತಂಕದಿಂದ ದಿಕ್ಕೆಟ್ಟು ಓಡಿದ್ದಾರೆ. ಸಿಬ್ಬಂದಿ ಕೂಡಾ ಪ್ರಯಾಣಿಕರನ್ನು ದೂರಕ್ಕೆ ಕಳುಹಿಸಿದರು ಮತ್ತು ಕೂಡಲೇ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಕಾಲದಲ್ಲಿ ಬೆಂಕಿಯನ್ನು ನಂದಿಸಲಾಯಿತು. ಹೀಗಾಗಿ ಬೆಂಕಿ ಬೇರೆ ಕಡೆಗೆ ಹರಡುವುದು ತಪ್ಪಿತು.

ಬೆಂಕಿ ಕಂಡ ತಕ್ಷಣ ಸ್ಥಳದಲ್ಲಿದ್ದ ಪ್ರಯಾಣಿಕರು, ಅಂಗಡಿ ವ್ಯಾರಸ್ಥರನ್ನ ಬೇರೆಡೆಗೆ ಕಳುಹಿಸಿದ ಸಿಬ್ಬಂದಿ ಅಗ್ನಿಶಮನ ಸಾಧನಗಳನ್ನು ಬಳಸಿ ಬೆಂಕಿಯನ್ನು ನಂದಿಸಿದರು.

ಇದನ್ನೂ ಓದಿ | Fire tragedy | ಯಲ್ಲಾಪುರ ಆರತಿಬೈಲ್‌ ಘಾಟಿಯಲ್ಲಿ ಕಬ್ಬಿಣ ಹೊತ್ತು ಸಾಗುತ್ತಿದ್ದ ಲಾರಿ ಬೆಂಕಿಗೆ ಆಹುತಿ!

Exit mobile version