Site icon Vistara News

Fire tragedy : ಐಸ್‌ ಕ್ರೀಂ ತಯಾರಿಕೆ ಘಟಕ, ದಾಸ್ತಾನು ಕಟ್ಟಡದಲ್ಲಿ ಬೆಂಕಿ, ಲಕ್ಷಾಂತರ ರೂ. ಮೌಲ್ಯದ ಐಸ್‌ಕ್ರೀಂ ನಷ್ಟ

Ice cream factory gutted

#image_title

ಮಂಗಳೂರು: ಮಂಗಳೂರು ಹೊರವಲಯದಲ್ಲಿರುವ ಅಡ್ಯಾರ್‌ನಲ್ಲಿ ಐಸ್‌ ಕ್ರೀಂ ದಾಸ್ತಾನು ಮತ್ತು ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ (Fire tragedy) ಸಂಭವಿಸಿದೆ. ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಟ್ಟಡದಲ್ಲಿ ಬೆಂಕಿ ಹತ್ತಿಕೊಂಡಿದೆ.

ಇದು ಕೆಎಂಎಫ್‌ನ ನಂದಿನಿ ಐಸ್ ಕ್ರೀ‍ಮ್ ಪ್ರೊಡಕ್ಟ್‌ಗಳನ್ನು ದಾಸ್ತಾನು ಇಡಲಾಗಿದ್ದ ಕಟ್ಟಡದಲ್ಲಿ ಹತ್ತಿಕೊಂಡ ಬೆಂಕಿ ಐಸ್ ಕ್ರಿಮ್ ತಯಾರಿಕಾ ಘಟಕಕ್ಕೂ ಹಬ್ಬಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಹರ್ಷಮಣಿ ಎಸ್. ರೈ ಎಂಬವರಿಗೆ ಸೇರಿದ ದಾಸ್ತಾನು ಮಳಿಗೆ ಇದಾಗಿದ್ದು, ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಅಗ್ನಿ ದುರಂತದಿಂದಾಗಿ ಕೊಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಮೊಬೈಲ್‌ ಅಂಗಡಿ ಅಗ್ನಿಗಾಹುತಿ

ಬೆಂಗಳೂರು: ರಾಜಧಾನಿಯ ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆ ಮೊಬೈಲ್‌ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ (Fire tragedy). ಒಮ್ಮಿಂದೊಮ್ಮೆಗೆ ಹುಟ್ಟಿಕೊಂಡ ಬೆಂಕಿ, ಧಗಧಗಿಸಿ ಉರಿಯುತ್ತಿರುವುದನ್ನು ಕಂಡು ಪರಿಸರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ವಿಜಯ ನಗರದಲ್ಲಿರುವ ಈ ಮೊಬೈಲ್‌ ಅಂಗಡಿಯಲ್ಲಿ ಮಾಲೀಕ ರಾತ್ರಿ ಮೊಬೈಲ್‌ ಚಾರ್ಚ್‌ಗೆ ಹೋಗಿದ್ದರು. ಅದರಿಂದಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಡಿಗೆ ಬೆಂಕಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಮುಂಜಾನೆ ಮುಂಜಾನೆ ಏಳು ಗಂಟೆಗೆ ಹೊತ್ತಿಗೆ ಸಣ್ಣದಾಗಿ ಹೊತ್ತಿ ಉರಿಯಲು ಆರಂಭಿಸಿದ ಬೆಂಕಿ, ಬಳಿಕ ಆಕಾಶದೆತ್ತರಕ್ಕೆ ಕೆನ್ನಾಲಿಗೆಗಳು ಚಾಚಿದವು. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುವ ಅಪಾಯವೂ ಕಂಡುಬಂತು. ಆದರೆ, ಅದೃಷ್ಟವಶಾತ್‌ ಆ ರೀತಿ ಆಗಿಲ್ಲ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಾನು ಒಂದು ಮೊಬೈಲನ್ನು ಚಾರ್ಜ್‌ಗೆ ಹಾಕಿಟ್ಟು ಹೋಗಿದ್ದೆ. ಹೇಗೆ ಈ ರೀತಿ ಬೆಂಕಿ ಹತ್ತಿಕೊಂಡಿತು ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಗಿದೆ.

ಇದನ್ನೂ ಓದಿ : Fire tragedy : ಬೆಂಕಿ ಬಿದ್ದ ಕೊಟ್ಟಿಗೆಯಿಂದ ನಾಲ್ಕು ದನಗಳನ್ನು ರಕ್ಷಿಸಿದ ಸಾಹಸಿ ಕೊನೆಗೆ ತಾನೇ ಸುಟ್ಟು ಹೋದ

Exit mobile version