ಬೆಂಗಳೂರು: ರಾಜಧಾನಿಯ ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆ ಮೊಬೈಲ್ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ (Fire tragedy). ಒಮ್ಮಿಂದೊಮ್ಮೆಗೆ ಹುಟ್ಟಿಕೊಂಡ ಬೆಂಕಿ, ಧಗಧಗಿಸಿ ಉರಿಯುತ್ತಿರುವುದನ್ನು ಕಂಡು ಪರಿಸರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ವಿಜಯ ನಗರದಲ್ಲಿರುವ ಈ ಮೊಬೈಲ್ ಅಂಗಡಿಯಲ್ಲಿ ಮಾಲೀಕ ರಾತ್ರಿ ಮೊಬೈಲ್ ಚಾರ್ಚ್ಗೆ ಹೋಗಿದ್ದರು. ಅದರಿಂದಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಡಿಗೆ ಬೆಂಕಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಮುಂಜಾನೆ ಮುಂಜಾನೆ ಏಳು ಗಂಟೆಗೆ ಹೊತ್ತಿಗೆ ಸಣ್ಣದಾಗಿ ಹೊತ್ತಿ ಉರಿಯಲು ಆರಂಭಿಸಿದ ಬೆಂಕಿ, ಬಳಿಕ ಆಕಾಶದೆತ್ತರಕ್ಕೆ ಕೆನ್ನಾಲಿಗೆಗಳು ಚಾಚಿದವು. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುವ ಅಪಾಯವೂ ಕಂಡುಬಂತು. ಆದರೆ, ಅದೃಷ್ಟವಶಾತ್ ಆ ರೀತಿ ಆಗಿಲ್ಲ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾನು ಒಂದು ಮೊಬೈಲನ್ನು ಚಾರ್ಜ್ಗೆ ಹಾಕಿಟ್ಟು ಹೋಗಿದ್ದೆ. ಹೇಗೆ ಈ ರೀತಿ ಬೆಂಕಿ ಹತ್ತಿಕೊಂಡಿತು ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಗಿದೆ.
ಬೈಲಹೊಂಗಲದ ಇಂಚಲ ಗ್ರಾಮದಲ್ಲಿ ಅಗ್ನಿದುರಂತ: 20ಕ್ಕೂ ಅಧಿಕ ರೈತರ ಬಣವೆ ಭಸ್ಮ, ಟ್ರ್ಯಾಕ್ಟರ್
ಬೈಲಹೊಂಗಲ: ತಾಲೂಕಿನ ಇಂಚಲ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ರೈತರ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಸುಟ್ಟು ಬೂದಿಯಾಗಿವೆ. ಒಂದು ಟ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.
ರೈತರು ಬೆಳೆಗಳ ರಾಶಿ ಮುಗಿಸಿ ಗ್ರಾಮದ ಹೊರವಲಯದಲ್ಲಿ ಬಣವೆಗಳ ಮೂಲಕ ದನ ಕರುಗಳ ಮೇವು ಸಂಗ್ರಹಣೆ ಮಾಡಿದ್ದರು. ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಬಣವೆಗಳು, ಕೃಷಿ ಸಲಕರಣೆ ಬೆಂಕಿಗೆ ಆಹುತಿಯಾಗಿವೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಎರಡು ವಾಹನ, ಪಕ್ಕದ ಜಮೀನಿನ ರೈತರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಲು ಶ್ರಮಿಸಿದರೂ ನಿಯಂತ್ರಣಕ್ಕೆ ಬರಲಿಲ್ಲ. ಬೆಳಗಾವಿ, ಗೋಕಾಕ, ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ನೆರವಾದರು.
ರೈತರು ತಮ್ಮ ಬೋರ್ ವೆಲ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು. ಬಣವೆ ಸುತ್ತಮುತ್ತ ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಗೋವಿನ ಜೋಳದ ಬೆಳೆ, ಜೋಳ ಹಾನಿಯಾಗಿದೆ. ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಅರಿತು ಕಣದಲ್ಲಿರುವ ಎತ್ತುಗಳ ಕಣಿ ಬಿಚ್ಚಿದ ಪರಿಣಾಮ ಎತ್ತಗಳು ಸುರಕ್ಷಿತವಾಗಿ ಉಳಿದವು.
ಸತತ 6 ಗಂಟೆಗಳ ಕಾಲ ನಿರಂತರವಾಗಿ ಆಗ್ನಿಶಾಮಕದಳದ ಸಿಬ್ಬಂದಿ, ರೈತರು, ನೂರಾರು ನಾಗರೀಕರು ಬೆಂಕಿ ನಂದಿಸಲು ನೆರವಾದರು. ದನಕರುಗಳಿಗೆ ಸಂಗ್ರಹಿಸಿಟ್ಟದ್ದ ಬಣವೆಗಳಿಗೆ ಏಕಾಏಕಿ ಬೆಂಕಿ ತಗುಲಿ ಅಪಾರ ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Fire tragedy: ಬಟ್ಟೆ ಅಂಗಡಿಯಲ್ಲಿ ಬೆಂಕಿ, ದಂಪತಿ ಬಲಿ