Site icon Vistara News

Fire tragedy | ಬೆಂಕಿಯ ಕೆನ್ನಾಲಿಗೆಗೆ ಮನೆ ಸಂಪೂರ್ಣ ಭಸ್ಮ: ಎಮ್ಮೆ, ಕರು ಕೂಡಾ ಅಗ್ನಿಗಾಹುತಿ

tumkur fire

ತುಮಕೂರು: ತಡರಾತ್ರಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ (Fire tragedy) ಇಡೀ ಮನೆಯನ್ನೇ ಸುಟ್ಟು ಹಾಕಿದೆ. ಬೆಂಕಿ ಕೆನ್ನಾಲಿಗೆಗೆ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವುದಲ್ಲದೆ ಒಂದು ಎಮ್ಮೆ, ಕರು, ಮೇಕೆ, ಸಾವಿರಾರು ಕೊಬ್ಬರಿ ಹಾಗೂ ಮನೆಯಲ್ಲಿದ್ದ ವಸ್ತುಗಳು ದಹಿಸಿವೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆನೆಮಳೆ ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ ಮನೆ ಇದು. ತಡರಾತ್ರಿ ಯಾವುದೋ ಕಿಡಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಬೆಂಕಿ ನಂದಿಸಲು ಮನೆಯ ಸಮೀಪ ಸಿಗುವ ಎಲ್ಲ ಪರಿಕರಗಳನ್ನು ಬಳಸಲಾಯಿತು. ಆದರೆ, ಸಾಧ್ಯವಾಗಲಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದರೂ ರಸ್ತೆ ಸರಿ ಇಲ್ಲದೇ ಸ್ಥಳಕ್ಕೆ ತೆರಳಲು ಸಾಧ್ಯವಾಗದ ಸ್ಥಿತ ಇತ್ತು. ಬಳಿಕ ಜೆಸಿಬಿ ಮೂಲಕ ಮಣ್ಣು ಹಾಕಿ, ಮನೆಯನ್ನು ಉರುಳಿಸಿ ಬೆಂಕಿ ನಂದಿಸಬೇಕಾಯಿತು. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಯಿತು.

ಇದನ್ನೂ ಓದಿ | Car Catches Fire | ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಪ್ರಾಣಾಪಾಯದಿಂದ ನಾಲ್ವರು ಪಾರು

Exit mobile version