ಕಲಬುರಗಿ : ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಗುಂಡಿನ ದಾಳಿ (Kalaburagi Firing) ನಡೆದಿದೆ. ಸುನಿಲ್ ಎಂಬಾತ ಫೈರಿಂಗ್ (Firing Case) ಮಾಡಿದವನು.
ಸುನಿಲ್ ಮಹಾಲಕ್ಷ್ಮಿ ಲೇಔಟ್‌ಗೆ ಬಂದಿದ್ದ. ಈ ವೇಳೆ ಉಮೇಶ್ ಯಳವಂತಿ ಎಂಬಾತ ಸುನಿಲ್‌ನನ್ನು ಅಡ್ಡಗಟ್ಟಿದ್ದ. ಬಳಿಕ ನಮ್ಮ ಏರಿಯಾಗೆ ಯಾಕೆ ಬಂದಿರುವುದು ಎಂದು ಪ್ರಶ್ನೆ ಮಾಡಿದ್ದ. ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಸರಣಿ ಅಪಘಾತ; ಬೈಕ್ ಸವಾರ ದಾರುಣ ಸಾವು
ಈ ವೇಳೆ ಸಿಟ್ಟಿಗೆದ್ದ ಸುನಿಲ್ ತನ್ನ ಬಳಿ ಇದ್ದ ಗನ್‌ನಿಂದ ಉಮೇಶ್ ಮೇಲೆ ಏಕಾಏಕಿ ಫೈರ್ ಮಾಡಿದ್ದಾನೆ. ಸುನೀಲ್ ಹಾರಿಸಿದ ಗುಂಡು ಗೋಡೆಗೆ ತಗುಲಿದ ಕಾರಣಕ್ಕೆ ಕೂದಲೆಳೆ ಅಂತರದಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಸದ್ಯ ರೋಜಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಗುಂಡಿನ ದಾಳಿ ಮಾಡಿದ ಸುನಿಲ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುನಿಲ್ ಬಳಿ ಗನ್ ಹೇಗೆ ಬಂತು, ಲೈಸನ್ಸ್ ಇದೆಯೇ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ