ಬೆಂಗಳೂರು: ನಮ್ಮ ಕನಸಿನ ಮನೆಗಳನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಎಎಸಿ (ಆಟೋಕ್ಲೇವ್ಡ್ ಏರೇಟೆಡ್ ಕಾಂಕ್ರೀಟ್) ಬ್ಲಾಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮೆಗಾಲೈಟ್ (Megha Lite) ಸಂಸ್ಥೆಯಲ್ಲಿ ಮೊದಲ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡಲಾಯಿತು.
ಬೆಂಗಳೂರಿನ ಸರ್ಜಾಪುರದಲ್ಲಿರುವ ಕಾರ್ಖಾನೆಯಲ್ಲಿ ಕೇಕ್ ಕತ್ತರಿಸಿ ಮೆಗಾ ಪ್ರಾಜೆಕ್ಟ್ಸ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ವಿ.ಧರ್ಮೇಶ್ ಹಾಗೂ ಪಾರ್ಟ್‌ನರ್ ಮತ್ತು ಸಿಇಒ ಆಗಿರುವ ವೇಣು ಪೊಟ್ಟ ಅವರು ಸಿಬ್ಬಂದಿ ಜತೆ ಮೊದಲ ವಾರ್ಷಿಕೋತ್ಸವದ ಸಂಭ್ರಮಾಚರಿಸಿದರು. ಎಚ್.ವಿ.ಧರ್ಮೇಶ್ ಅವರು ವಿಸ್ತಾರ ಮೀಡಿಯಾದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಎಎಸಿ ಬ್ಲಾಕ್‌ಗಳ ಉತ್ಪಾದನೆಯಲ್ಲಿ ಮೆಗಾಲೈಟ್ ಕಂಪನಿಯು ಮುಂಚೂಣಿಯಲ್ಲಿದೆ. ಸಾಮಾನ್ಯ ಇಟ್ಟಿಗೆಗಳಿಗಿಂತ ಮೂರು ಪಟ್ಟು ಹಗುರವಾಗಿರುವ ಆದರೆ, ದೀರ್ಘಾವಧಿಗೆ ಬಾಳಿಕೆ ಬರುವ ಎಎಸಿ ಬ್ಲಾಕ್‌ಗಳನ್ನು ಮನೆ, ಕಚೇರಿಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ.
ಇಂತಹ ಗುಣಮಟ್ಟದ ಎಎಸಿ ಬ್ಲಾಕ್‌ಗಳನ್ನು ಮೆಗಾಲೈಟ್ ಉತ್ಪಾದಿಸುತ್ತದೆ. ಒಂದು ವರ್ಷದಲ್ಲಿಯೇ ಮೆಗಾಲೈಟ್ ಸಂಸ್ಥೆಯು ಒಂದು ಲಕ್ಷ ಕ್ಯೂಬಿಕ್ ಮೀಟರ್ ಎಎಸಿ ಬ್ಲಾಕ್‌ಗಳನ್ನು ಉತ್ಪಾದಿಸುವ ಮೂಲಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ | Varamahalakshmi Vrata | ಮೆಗಾಲೈಟ್ ಕಚೇರಿಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಆಚರಣೆ