ಕೊಡಗು: ಕಳೆದ ವಾರದಿಂದಲೂ ಬಿಟ್ಟೂಬಿಡದೆ ಸುರಿಯುತ್ತಿರುವ ಮಹಾ ಮಳೆಯನ್ನು(Rain News) ಎದುರಿಸಲು ಜಿಲ್ಲಾಡಳಿತ, ಸಾರ್ವಜನಿಕರು ಮುಂಜಾಗ್ರತೆ ಕೈಗೊಂಡಿದ್ದರಿಂದ ಇಲ್ಲಿವರೆಗೆ ಯಾವುದೇ ಮಾನವ ಪ್ರಾಣ ಹಾನಿ ಉಂಟಾಗಿರಲಿಲ್ಲ. ಆದರೆ ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮಿಪದ ದುಂಡಳ್ಳಿ ಸುಳುಗಳಲ್ಲಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ವಸಂತಮ್ಮ(70) ಮೃತೆ.
ಭಾರಿ ಮಳೆಯಿಂದ ಸ್ನಾನದ ಮನೆಯ ಗೊಡೆ ಬಿದ್ದು ವಸಂತಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ವಸಂತಮ್ಮ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ಧೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ವಿವಿಧೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ ಇದೀಗ ಮಳೆಯಿಂದ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ.
ಇದನ್ನೂ ಓದಿ | Rain News | ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಮೂವರಿಗೆ ಗಾಯ
ಮನೆ ಕುಸಿತ
ಕುಶಾಲನಗರ ಸಮೀಪದ ಶಿರಂಗಾಲದಲ್ಲಿ ಶನಿವಾರ ಬೆಳಗಿನ ಜಾವ ಗೌರಮ್ಮ ಶಿವಣ್ಣ ಎಂಬವರ ಮನೆ ಗೋಡೆ ಹಾಗೂ ಮೇಲ್ಚಾವಣಿ ಕುಸಿತಗೊಂಡಿದೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಗೌರಮ್ಮ ಮತ್ತು ಶಿವಣ್ಣ ಎಂಬವರಿಗೆ ಸೇರಿದ ಮನೆಯು ಮಳೆಯಿಂದ ಹಾನಿಗೊಳಗಾಗಿದ್ದು, ಕುಸಿದು ಬಿಳುವ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೆ ಇದ್ದರು. ಆದರೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.