ಬೆಂಗಳೂರು: ಪೊಲೀಸ್ ಠಾಣೆಯೊಂದರಲ್ಲಿ ಇದೇ ಮೊದಲ ಬಾರಿಗೆ ಲೈಬ್ರರಿ ಸೆಂಟ್ರಲ್ ಅನ್ನು ಪ್ರಾರಂಭ ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಜನಸ್ನೇಹಿ ಗ್ರಂಥಾಲಯ ತೆರಯಲಾಗಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಗ್ರಂಥಾಲಯವನ್ನು ಉದ್ಘಾಟನೆ ಮಾಡಿದರು.
ಈ ಆರಕ್ಷಕ ಗ್ರಂಥಾಲಯವು ಕೇವಲ ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲದೆ ಸಾರ್ವಜನಿಕರು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಸಾರ್ವಜನಿಕರು, ಸಿಬ್ಬಂದಿಯ ಓದುವಿಕೆಯ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಜತೆಗೆ ಜನರ ಒಡನಾಟವನ್ನು ಹೊಂದಲು ಈ ಹೊಸ ಪರಿಕಲ್ಪನೆಗೆ ಮುಂದಾಗಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬು ಅವರಿಂದ ಈ ವಿನೂತನ ಕಾರ್ಯ ಶುರು ಮಾಡಲಾಗಿದೆ. ಇದು ಯಶಸ್ವಿಯಾದರೆ ಇತರೆ ಡಿವಿಷನ್ ಪೊಲೀಸ್ ಠಾಣೆಯಲ್ಲೂ ಗ್ರಂಥಾಲಯ ಪ್ರಾರಂಭ ಮಾಡುವ ಚಿಂತನೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ | Digital Media | ಡಿಜಿಟಲ್ ಮಾಧ್ಯಮ ನಿಯಂತ್ರಣ, ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ, ಸಚಿವ ಅನುರಾಗ್ ಘೋಷಣೆ ಏನು?