ಬೆಂಗಳೂರು: ತರಕಾರಿ, ಬೇಳೆ ಕಾಳುಗಳ ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದ ಜನರಿಗೆ ಇದೀಗ ನಾನ್ ವೆಜ್ ಕೂಡ ಕೈ ಸುಡುತ್ತಿದೆ. ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರವಾಗಿರುವ ಮೀನಿಗೆ ಈಗ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಇದರಿಂದ ಮೀನುಪ್ರಿಯರಿಗೆ ಬೆಲೆ ಏರಿಕೆ (Fish Price Hike) ಬಿಸಿ ತಟ್ಟಿದೆ.
ಟೊಮ್ಯಾಟೊ ಸೇರಿ ವಿವಿಧ ತರಕಾರಿ ಬೆಲೆ ಗ್ರಾಹಕರ ತಲೆಬಿಸಿ ಮಾಡಿರುವ ಹೊತ್ತಲ್ಲೇ ಮೀನು ಪ್ರಿಯರಿಗೂ ಬೆಲೆ ಏರಿಕೆ ಶಾಕ್ ತಟ್ಟಿದೆ. ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ಬ್ರೇಕ್ ಬಿದ್ದಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಮೀನುಗಳ ದರ ಆಗಸ ಮುಟ್ಟಿವೆ. ಇನ್ನೂ 3 ತಿಂಗಳ ಕಾಲ ಮೀನುಗಳು ಸಂತಾನ್ಪೋತ್ಪತ್ತಿ ಮಾಡುವ ಸಮಯ ಇರುವುದರಿಂದ ಸಮುದ್ರಗಳಲ್ಲಿ ಮೀನುಗಾರಿಕೆಗೆ ಬ್ರೇಕ್ ಬಿದ್ದಿದೆ. ಇದರಿಂದ ಮೀನುಗಳ ದರ ಶೇಕಡ 30 ರಿಂದ 40 ರಷ್ಟು ಹೆಚ್ಚಳವಾಗಿದ್ದು, ಹೊರ ರಾಜ್ಯಗಳಿಂದ ಮೀನು ಖರೀದಿ ಹೆಚ್ಚಾಗಿರುವುದು ಬೆಲೆಯನ್ನು ಮತ್ತಷ್ಟು ದುಬಾರಿ ಮಾಡಿದೆ.
ಇದನ್ನೂ ಓದಿ | Viral Video: ಟೊಮ್ಯಾಟೊ ಕಾವಲಿಗೆ ಕಾಳಿಂಗ ಸರ್ಪ; ಬುಟ್ಟಿ ಬಳಿ ಕುಳಿತು ಬುಸ್ಗುಡುತ್ತಿದೆ ಹಾವು!
ಮಂಗಳೂರು, ಕಾರವಾರ, ಭಟ್ಕಳದಿಂದ ಬರುತ್ತಿದ್ದ ಮೀನುಗಳು ಕಡಿಮೆಯಾಗಿದ್ದು, ಇತ್ತ ಬಾಂಗಡೆ, ಭೂತಾಯಿ, ಸಿಲ್ವರ್ ಫಿಶ್, ಕೆರೆಮೀನು ಸೇರಿ ಹಲವು ಮೀನುಗಳ ದರ ಶತಕದ ಗಡಿ ದಾಟಿದೆ. ಕೆಲ ಮೀನುಗಳ ದರ ಈ ಕೆಳಗಿನಂತಿದೆ.
ಜು.15ರಂದು ಯಾವ್ಯಾವ ಮೀನು ಎಷ್ಟೆಷ್ಟು ದರ?
1) ಬಂಗಡೆ
ಇಂದಿನ ಬೆಲೆ-350 ರೂ.
ಹಿಂದಿನ ಬೆಲೆ-120 ರೂ.
2) ಭೂತಾಯಿ
ಇಂದಿನ ಬೆಲೆ-250 ರೂ.
ಹಿಂದಿನ ಬೆಲೆ-140 ರೂ.
3)ಕಪ್ಪು ಬಾನ್ಚಿ
ಇಂದಿನ ಬೆಲೆ-1000 ರೂ.
ಹಿಂದಿನ ಬೆಲೆ-600 ರೂ.
4) ಬಿಳಿ ಮಾನ್ಚಿ
ಇಂದಿನ ಬೆಲೆ- 1020 ರೂ.
ಹಿಂದಿನ ಬೆಲೆ – 600 ರೂ.
5) ಟ್ಯೂನಾ
ಇಂದಿನ ಬೆಲೆ-380 ರೂ.
ಹಿಂದಿನ ಬೆಲೆ – 250 ರೂ.
ಇದನ್ನೂ ಓದಿ | Tomato Price: ಸಿರಿವಂತಿಕೆ ತಂದುಕೊಟ್ಟ ಟೊಮ್ಯಾಟೊ; ಪುಣೆಯ ಬೆಳೆಗಾರ ಈಗ ಕೋಟ್ಯಧೀಶ!
ಸದ್ಯ ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು, ಇದೀಗ ಮೀನಿನ ಬೆಲೆ ಕೂಡ ಹೆಚ್ಚಾಗಿರುವುದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲದರ ಬೆಲೆ ಹೆಚ್ಚಾದರೆ ಬಡವರು, ಮಧ್ಯಮವರ್ಗದವರು ಏನು ತಿನ್ನಬೇಕು ಎಂದು ಕಿಡಿಕಾರುತ್ತಿದ್ದು, ತರಕಾರಿ ಹಾಗೂ ಮಾಂಸಾಹಾರ ಬೆಲೆ ಏರಿಕೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.