Site icon Vistara News

Fishermen rescued : ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಿಂದ ನಾಲ್ವರು ಮೀನುಗಾರರ ರಕ್ಷಣೆ

Karwar boat rescued

#image_title

ಕಾರವಾರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ (Fishermen rescued) ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರಬ್ಬೀ ಸಮುದ್ರ ವ್ಯಾಪ್ತಿಯ 30 ನಾಟಿಕಲ್ ಮೈಲು ದೂರದಲ್ಲಿ ಜೈಭಾರತ್ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ ಹಂತದಲ್ಲಿತ್ತು. ಈ ವೇಳೆ ರಕ್ಷಣೆಗಾಗಿ ಇತರೆ ಬೋಟುಗಳಿಗೆ ಸಂದೇಶ ರವಾನಿಸಿದ್ದರು. ಆಗ ಲಲಿತ್ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ರಕ್ಷಣೆಗೆ ಧಾವಿಸಲಾಗಿದ್ದು, ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಯಿತು.

ಮುಳುಗುತ್ತಿದ್ದ ಮೀನುಗಾರಿಕಾ ಬೋಟನ್ನು ಲಲಿತ್ ಬೋಟಿಗೆ ಕಟ್ಟಿ ಹೊನ್ನಾವರದ ಕಾಸರಕೋಡು ಬಂದರಿಗೆ ತರಲಾಗಿದೆ.

ಹೂಳಿನ ಸಮಸ್ಯೆಯೇ ಕಾರಣ ಎಂದು ಆರೋಪ

ಕಾಸರಕೋಡು ಬಂದರು ಪ್ರದೇಶದಲ್ಲಿ ಸಾಕಷ್ಟು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿಕೊಂಡು ಬೋಟುಗಳು ಬಂದರಿಗೆ ವಾಪಸ್ಸಾಗಲು ಪರದಾಡುವಂತಾಗಿದೆ. ಹೂಳಿನ ಕಾರಣದಿಂದಲೇ ಈ ಬೋಟು ಕೂಡಾ ಮುಳುಗಿದ್ದು ಎಂದು ಮೀನುಗಾರರು ಆಕ್ಷೇಪಿಸಿದ್ದಾರೆ.

ಈಗಾಗಲೇ ಹಲವಾರು ಬೋಟುಗಳು ಅವಘಡಕ್ಕೆ ತುತ್ತಾಗುತ್ತಿದ್ದು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Accidents: ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು: ದೋಣಿ ಮುಳುಗಿ ಮೀನುಗಾರ, ವಿದ್ಯುತ್‌ ಕಂಬ ಬಿದ್ದು ರೈತ ಮೃತ್ಯು

Exit mobile version