ರಾಯಚೂರು: ನಗರದ 13ನೇ ನಂ. ವಾರ್ಡ್ನ ಮಂಗಳವಾರಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಅನ್ನದ ಗಂಜಿ ಬಿದ್ದು ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಹಿಬಾ(3), ಅರ್ಹಾನ್(3), ಮೊಹಮ್ಮದ್ ಜಾಹಿದ್(3), ಶೇಕ್ ಅದ್ನಾನ್(4) ಹಾಗೂ ಬಿಬಿ ಮರಿಯಮ್(3) ಗಾಯಗೊಂಡ ಮಕ್ಕಳು.
ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವವರು ಅನ್ನದ ಗಂಜಿಯನ್ನು ಬಸಿಯತ್ತಿದ್ದಾಗ ಸಮೀಪದಲ್ಲೇ ಆಟವಾಡುತ್ತಿದ್ದ ಮಕ್ಕಳು ದಿಢೀರನೆ ಓಡಿ ಬಂದು ಅವರಿಗೆ ಡಿಕ್ಕಿ ಹೊಡೆದರು. ಈ ವೇಳೆ ಅನ್ನದ ಪಾತ್ರೆಯಿಂದ ಗಂಜಿ ಚೆಲ್ಲಿದ್ದರಿಂದ ಐವರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣ ಗಾಯಗೊಂಡ ಮಕ್ಕಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸುಟ್ಟ ಗಾಯಗಳಿಂದ ರೋದಿಸುತ್ತಿರುವ ಮಕ್ಕಳನ್ನು ಕಂಡು ಪಾಲಕರು ಕಣ್ಣೀರಿಡುತ್ತಿದ್ದಾರೆ. ಇನ್ನು ಮಕ್ಕಳ ಜತೆಗೆ ಅಡುಗೆ ಸಹಾಯಕಿಯೂ ಗಾಯಗೊಂಡಿದ್ದು, ಆಕೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ | ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಪಿಯು ವಿದ್ಯಾರ್ಥಿಗಳು ನೀರು ಪಾಲು