Site icon Vistara News

Drowned in Sea: ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರ ರಕ್ಷಣೆ

five tourists drowning in gokarnas kudle sea rescued drowned in sea updates

ಕಾರವಾರ: ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಈಜಲು ತೆರಳಿದ್ದಾಗ ಅಲೆಯಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದ (Drowned in Sea) ಐವರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಹಾವೇರಿ ಜಿಲ್ಲೆಯ ಅಮನ್ (32), ನವಾಜ್ (31), ಅಶಪಾಕ್ (30) ಹುಬ್ಬಳ್ಳಿ ಮೂಲದ ವರದರಾಜ್ (22), ಸಂಜಯ್ ಕುಮಾರ್ (22) ರಕ್ಷಣೆಗೊಳಗಾದವರು ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ಮತ್ತು ಹಾವೇರಿಯಿಂದ ಈ ಯುವಕರ ತಂಡ ಪ್ರವಾಸಕ್ಕೆ ಬಂದಿತ್ತು. ಇವರೆಲ್ಲರೂ ಸೇರಿ ಸಮುದ್ರ ಸ್ನಾನ ಮಾಡಲು ಹೋಗಿದ್ದಾರೆ. ಅಲ್ಲಿಯೇ ಈಜಲು ಮುಂದಾಗಿದ್ದಾರೆ. ಈ ನಡುವೆ ಅಲೆಗಳು ಅಬ್ಬರ ಹೆಚ್ಚಾಗಿದ್ದು, ಈಜಲು ಆಗದೇ ಮುಳಗಲು ಪ್ರಾರಂಭಿಸಿದ್ದಾರೆ. ಆಗ ರಕ್ಷಣೆಗಾಗಿ ಕಿರುಚಿಕೊಂಡಿದ್ದಾರೆ.

ಇದನ್ನೂ ಓದಿ: H D Revanna: ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು; ಬಿಜೆಪಿಯವರಿಗೆ ಏನಾದ್ರೂ ಮಾನ, ಮರ್ಯಾದೆ ಇದ್ಯಾ ಎಂದ ಎಚ್‌.ಡಿ.ರೇವಣ್ಣ

ಈ ವೇಳೆ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಪ್ರವಾಸಿಮಿತ್ರ ಶೇಖರ್ ಪೂಜಾರಿ, ಲೈಫ್‌ಗಾರ್ಡ್ ನವೀನ ಅಂಬಿಗ, ನಾಗೇಂದ್ರ ಎಂಬುವವರು ಸಮುದ್ರಕ್ಕೆ ಜಿಗಿದು ಈ ಐವರನ್ನೂ ರಕ್ಷಣೆ ಮಾಡಿ ಹೊರಗೆ ತಂದಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version