Site icon Vistara News

Belagavi to Delhi flight: ಅ.1ರಿಂದ ದೆಹಲಿ-ಬೆಳಗಾವಿ ನಡುವೆ ವಿಮಾನಯಾನ ಸೇವೆ

ಬೆಂಗಳೂರು: ಸತತ ಪ್ರಯತ್ನಗಳ ಫಲವಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಬರ್‌ 1 ರಿಂದ ಪ್ರತಿದಿನ ವಿಮಾನಯಾನ ಸೇವೆ ಒದಗಿಸಲು ಸಮ್ಮತಿಸಿದೆ. ಇದರಿಂದ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಅಕ್ಟೋಬರ್‌ 1 ರಂದು ದೆಹಲಿ ಮತ್ತು ಬೆಳಗಾವಿ ನಡುವೆ ವಿಮಾನಯಾನ ಆರಂಭಿಸುವ ಜತೆಗೆ ಅಕ್ಟೋಬರ್‌ 31 ರಿಂದ ಪುಣೆ-ಬೆಳಗಾವಿ ನಡುವೆ ಕೂಡ ವಾರದಲ್ಲಿ 3 ದಿನ (ಮಂಗಳವಾರ, ಗುರುವಾರ ಮತ್ತು ಶನಿವಾರ) ವಿಮಾನಯಾನ ಸಂಚಾರ ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅಕ್ಟೋಬರ್‌ 29ರಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ಪುಣೆ-ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ ಎಂದು ತಿಳಿಸಿರುವ ಅವರು, ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಿರುವ ಇಂಡಿಗೋ ಮತ್ತು ಸ್ಟಾರ್ ಏರ್‌ಲೆನ್ಸ್ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Power Point with HPK : ಟ್ರಾನ್ಸ್‌ಫರ್‌ ದಂಧೆ ನಿಲ್ಲಲೇಬೇಕು; ಸರ್ಕಾರದ ವಿರುದ್ಧ ರಾಯರೆಡ್ಡಿ ಆಕ್ರೋಶ ಸ್ಫೋಟ

Exit mobile version