Site icon Vistara News

Flower Politics: ದಾವಣಗೆರೆ ಪಾಲಿಕೆಯಲ್ಲಿ ಹೂವಿನ ಪಾಲಿಟಿಕ್ಸ್; ಕಿವಿಯಲ್ಲಿ ದಾಸವಾಳ ಇಟ್ಟು ಬಂದ ಕಾಂಗ್ರೆಸ್ ಸದಸ್ಯರು

congress leaders with hibiscus flower in their ears

#image_title

ದಾವಣಗೆರೆ: ಬಿಜೆಪಿ ಅಧಿಕಾರಲ್ಲಿರುವ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಜೆಟ್‌ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರು ಕಿವಿಯಲ್ಲಿ ದಾಸವಾಳ ಹೂವು ಇಟ್ಟುಕೊಂಡು (Flower Politics) ಬಂದು ಚರ್ಚೆಯಲ್ಲಿ ಭಾಗವಹಿಸಿದ್ದು ಕಂಡುಬಂತು. ರಾಜ್ಯ ಬಜೆಟ್‌ ವೇಳೆ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಬಳಸಿದ ತಂತ್ರವನ್ನು ಸ್ಥಳೀಯ ಕಾಂಗ್ರೆಸ್ ಸದಸ್ಯರು ಅನುಸರಿಸಿದ್ದಾರೆ.

ಬಿಜೆಪಿ ಸ್ಥಾಯಿ ಸಮಿತಿ ಸದಸ್ಯ ಸೋಗಿ ಶಾಂತಕುಮಾರ್‌ ಬಜೆಟ್ ಮಂಡನೆ ಮಾಡಿದರು. ಈ ವೇಳೆ ಬಜೆಟ್ ವಿರೋಧಿಸಿ‌ ಕಾಂಗ್ರೆಸ್ ಸದಸ್ಯರು ಕಿವಿಯಲ್ಲಿ ದಾಸವಾಳ ಹೂವು ಇಟ್ಟುಕೊಂಡು ಆಗಮಿಸಿದ್ದರಿಂದ ಚರ್ಚೆ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

Exit mobile version