Site icon Vistara News

Pocso Case: ಲಿಫ್ಟ್​​ನಲ್ಲಿ ಸಿಕ್ಕ ಬಾಲಕಿಗೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಹುಡುಗ ಸೆರೆ

Sexual assualt on SSLC Student by teacher

#image_title

ಫುಡ್​ ಡೆಲಿವರಿ ಕೊಡಲು (Food Delivery Boy) ಬಂದಿದ್ದ ಯುವಕನೊಬ್ಬ , ಲಿಫ್ಟ್​​ನಲ್ಲಿ ಸಿಕ್ಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ತಲಘಟ್ಟಪುರ ಅಪಾರ್ಟ್​​ಮೆಂಟ್​​ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್​​ಮೆಂಟ್​​ನ 13ನೇ ಮಹಡಿಯಲ್ಲಿರುವ ಫ್ಲಾಟ್​​ನಲ್ಲಿರುವವರಿಗೆ ಫುಡ್​ ಡೆಲಿವರಿ ಕೊಡಲು ಹೋಗಿದ್ದವ ಒಂಟಿಯಾಗಿ ಸಿಕ್ಕ ಬಾಲಕಿ ಮೇಲೆ ಕ್ರೌರ್ಯ ತೋರಿಸಿದ್ದಾನೆ.

13ನೇ ಮಹಡಿಗೆ ಚೇತನ್​ ಲಿಫ್ಟ್​​ನಲ್ಲಿ ಹೋಗುತ್ತಿದ್ದ. ಆಗ 10 ವರ್ಷದ ಬಾಲಕಿಯೂ ಅಲ್ಲಿ ಇದ್ದಳು. ಚೇತನ್​ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲಿಫ್ಟ್​ನಿಂದ ಹೊರಬಿದ್ದು ಮನೆಗೆ ಹೋದ ಹುಡುಗಿ ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ತಾಯಿ ತಕ್ಷಣವೇ ಅಪಾರ್ಟ್​ಮೆಂಟ್​​ನ ಸೆಕ್ಯೂರಿಟಿಗೆ ವಿಷಯ ಮುಟ್ಟಿಸಿದಳು. ಯುವಕ ಫುಡ್​ ಡೆಲಿವರಿ ಕೊಟ್ಟು ವಾಪಸ್​ ಹೋಗುವುದರೊಳಗೆ ಅಪಾರ್ಟ್​ಮೆಂಟ್​​ನ ಇತರ ನಿವಾಸಿಗಳು, ಸೆಕ್ಯೂರಿಟಿ ಎಲ್ಲ ಸೇರಿ ಅವನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಚೇತನ್​ ವಿರುದ್ಧ ಸದ್ಯ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಲಿಫ್ಟ್​​ನಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಫುಡ್​ ಡೆಲಿವರಿ ಬಾಯ್ ಕೃತ್ಯ ಸೆರೆಯಾಗಿದೆ. ಪೊಲೀಸರು ಚೇತನ್​​ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅಪಾರ್ಟ್​ಮೆಂಟ್​ಗಳಲ್ಲಿ ಹೀಗೆ ಮಕ್ಕಳೂ ಕೂಡ ಒಬ್ಬೊಬ್ಬರೇ ಲಿಫ್ಟ್​​ನಲ್ಲಿ ಓಡಾಡುವುದು ಸಾಮಾನ್ಯ. ಆದರೆ ಈ ಘಟನೆ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹೀಗೆ ಮಕ್ಕಳನ್ನು ಒಬ್ಬೊಬ್ಬರನ್ನೇ ಕಳಿಸುವ ಮುನ್ನ ಯೋಚಿಸುವಂತೆ ಮಾಡಿದೆ.

ಇದನ್ನೂ ಓದಿ: ಕಾವಿಧಾರಿಯ ಕಾಮಕಥೆ; 15 ವರ್ಷದ ಹುಡುಗಿ ಮೇಲೆ ಸ್ವಾಮೀಜಿಯಿಂದ ನಿರಂತರ ಲೈಂಗಿಕ ದೌರ್ಜನ್ಯ

Exit mobile version