Site icon Vistara News

Food Poisoning‌ | ಕೊಡಗು ಜಿಪಂ ಸಿಇಒ ದಂಪತಿ ಆರೋಗ್ಯದಲ್ಲಿ ವ್ಯತ್ಯಯ; ಐಸಿಯುವಿನಲ್ಲಿ ಚಿಕಿತ್ಸೆ

madikeri ceo hospitalized ಫುಡ್‌ ಪಾಯ್ಸನ್‌ ಐಸಿಯುವಿನಲ್ಲಿ ಚಿಕಿತ್ಸೆ ಮಡಿಕೇರಿ ಸಿಇಒ

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಕಾಶ್‌ ಹಾಗೂ ಅವರ ಪತ್ನಿಗೆ ಫುಡ್‌ ಪಾಯ್ಸನ್‌ (Food Poisoning‌) ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಿಇಒ ಆಕಾಶ್‌

ಮಂಗಳವಾರ (ಡಿ. ೧೩) ರಾತ್ರಿ ಊಟ ಮಾಡಿದ ಬಳಿಕ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಬಳಿಕ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಎಲ್ಲ ರೀತಿಯ ಪರೀಕ್ಷೆ ಮಾಡಿದ್ದು, ಕೆಲವು ವರದಿಗೆ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election | ತುಮಕೂರಲ್ಲಿ ಮತಬೇಟೆಗೆ ಶುರುವಾಯ್ತು ಆಣೆ ಪ್ರಮಾಣ; ಬಸ್‌ನಲ್ಲಿ ಕರೆದೊಯ್ದಿದ್ದ ಜೆಡಿಎಸ್‌ ಅಭ್ಯರ್ಥಿ

Exit mobile version