ಬೆಂಗಳೂರು: ದಕ್ಷಿಣ ಕೊರಿಯಾದ ಕಾನ್ಸುಲ್ ಜನರಲ್ ಚಾಂಗ್ ನ್ಯುನ್ ಕಿಮ್ ನೇತೃತ್ವದ ನಿಯೋಗ ಮಂಗಳವಾರ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ಮಾತುಕತೆ (Foreign Investment) ನಡೆಸಿತು.
ಸಚಿವ ಪಾಟೀಲ ನೇತೃತ್ವದ ರಾಜ್ಯ ನಿಯೋಗವು ಇತ್ತೀಚಿಗೆ ಕೊರಿಯಾಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಹೆಚ್ಚು ಬಂಡವಾಳ ನೀಡುವಂತೆ ಅಲ್ಲಿನ ಉದ್ದಿಮೆಗಳಿಗೆ ಆಹ್ವಾನಿಸಿತ್ತು.
ಇದನ್ನೂ ಓದಿ: Bengaluru Power Cut: ಜು.25ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಇಂದಿನ ಭೇಟಿಯ ಸಂದರ್ಭದಲ್ಲಿ ಎಂ.ಬಿ. ಪಾಟೀಲ ಅವರು, ರಾಜ್ಯದಲ್ಲಿ ಇರುವ ಕೈಗಾರಿಕಾ ಕಾರ್ಯಪರಿಸರ ಮತ್ತು ಉದ್ಯಮಸ್ನೇಹಿ ನೀತಿಗಳನ್ನು ವಿವರಿಸಿದರು. ಮುಖ್ಯವಾಗಿ ವಿದ್ಯುತ್ ಚಾಲಿತ ವಾಹನ ತಯಾರಿಕೆ, ಗ್ರೀನ್ ಎನರ್ಜಿ, ಮರುಬಳಕೆ ಇಂಧನ, ಆಟೋಮೊಬೈಲ್, ವೈಮಾಂತರಿಕ್ಷ ಮತ್ತು ಸಂಶೋಧನೆ ಮುಂತಾದ ವಲಯಗಳಿಗೆ ನೀಡಿರುವ ಆದ್ಯತೆ ಬಗ್ಗೆ ಮನದಟ್ಟು ಮಾಡಿಕೊಟ್ಟರು.
ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ
ಕೊರಿಯಾ ನಿಯೋಗದಲ್ಲಿ ಸಂಶೋಧಕರಾದ ಜೂನ್ ಸಿಕ್ ಹ್ವಾಂಗ್, ಇಂದುಜಾ ಅಗರವಾಲ್, ಸಿಯೋ ಯಂಗ್ ಮೂನ್ ಕೂಡ ಇದ್ದರು.