ಬೆಂಗಳೂರು: “ಹೆಲೋ.. ನಮಸ್ಕಾರ ನನ್ನ ಹೆಸರು ದೀಪಕ್ ಶರ್ಮಾ.. ಕೆನರಾ ಬ್ಯಾಂಕ್ ಮ್ಯಾನೇಜರ್.. ನಿಮ್ಮ ATM ಕಾರ್ಡ್ ಡಿಅಕ್ಟಿವೆಟ್ ಆಗಿದೆ. ಆಕ್ಟಿವೆಶನ್ ಮಾಡಿಕೊಳ್ಳಿ.“ ಹೀಗೆಂದು ಕರೆ ಬಂದರೆ ಕೂಡಲೆ ಎಚೆತ್ತುಕೊಳ್ಳಿ ಇದು ಒಂದು ಫೇಕ್ ಕಾಲ್ ಅಂತ.
ಏಕೆಂದರೆ ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಬಳಸಿ ಜನರಿಗೆ ವಂಚಿಸಿದ ಅನೇಕ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇದ್ದು, ಇದೀಗ ಮತ್ತೊಂದು ಪ್ರಕರಣ ಸೇರ್ಪಡೆ ಆಗಿದೆ. ವಂಚನೆ ಮಾಡುತ್ತಿದ್ದ ತಂಡವೊಂದನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ.
ಬಂಧಿತರನ್ನು ಆಫ್ರಿಕಾ ಮೂಲದ ನಿವಾಸಿಗಳಾದ ಫಾಸೋಯಿನ್ ಅವಲೋಹೋ ಅಡೇಯಿಂಕಾ, ಅಡ್ಜೇ ಅಂಗೇ ಅಲ್ಫ್ರೇಡ್ ಅಡೋನಿ ಎಂದು ಗುರುತಿಸಲಾಗಿದೆ. ಇವರು ಯಾವುದೇ ವೀಸಾ, ಪಾಸ್‌ಪೋರ್ಟ್ ಇಲ್ಲದೇ ಅಕ್ರಮವಾಗಿ ನೆಲೆಸಿದ್ದರು.
ಆರೋಪಿಗಳು ತ್ರಿಪುರ ಮೂಲದ ವ್ಯಕ್ತಿಯಿಂದ ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ತಾವು ನೀಡಿದ ನಂಬರ್‌ಗಳಿಂದ ಜನರಿಗೆ ಕರೆ ಮಾಡಿ ಉದ್ಯೋಗ ಕೊಡಿಸುವುದಾಗಿ, ಲೋನ್ ಕೊಡಿಸುವುದಾಗಿ, ಲಾಟರಿ, ಗಿಫ್ಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದರು. ನಂತರ ಪ್ರೊಸೆಸಿಂಗ್ ಫೀಸ್ ಸೇರಿ ವಿವಿಧ ಶುಲ್ಕಗಳನ್ನು ವಸೂಲಿ ಮಾಡುತ್ತಿದ್ದರು. ಹಣವನ್ನು ತ್ರಿಪುರಾದಲ್ಲಿ ತೆರೆಯಲಾಗಿದ್ದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಅಕ್ರಮವಾಗಿ ಭಾರತದಲ್ಲಿ ನೆಲಸಿ ನಕಲಿ ಸಿಮ್ ಮತ್ತು ನಕಲಿ ಬ್ಯಾಂಕ್ ಅಕೌಂಟ್ ಸೃಷ್ಟಿಸಿ ಕೃತ್ಯ ಎಸಗುತ್ತಿದ್ದ ಆರೋಪಿಗಳು ಇದೀಗ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ ವಶದಲ್ಲಿದ್ದಾರೆ.
ಬುಡಕಟ್ಟು ಜನಾಂಗದವರೇ ಟಾರ್ಗೆಟ್
ಬಂಧಿತ ತ್ರಿಪುರ ಮೂಲದ ವ್ಯಕ್ತಿಯಿಂದ 1 ಮೊಬೈಲ್ 2 ಸಿಮ್ ಕಾರ್ಡ್ ಜಪ್ತಿ ಮಾಡಲಾಗಿದೆ. ಈ ಆರೋಪಿ ಬುಡಕಟ್ಟು ಜನಾಂಗದವರಿಗೆ 2-3 ಸಾವಿರ ರೂ. ನೀಡಿ ಅವರ ಹೆಸರಿನಲ್ಲಿ ಸಿಮ್‌ಕಾರ್ಡ್, ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದ. ನಂತರ ಅವುಗಳನ್ನು ಬೆಂಗಳೂರಿನಲ್ಲಿ ವಾಸಿಸುತ್ತಿರುವ ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಗಳಿಗೆ ಮಾರುತ್ತಿದ್ದ. ವಿದೇಶಿ ಪ್ರಜೆಗಳಿಗೆ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ನೀಡಿ ಹೆಚ್ಚಿನ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ