Site icon Vistara News

ಬೇಸಿಗೆ ಆರಂಭಕ್ಕೂ ಮೊದಲೇ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಭಾರಿ ಕಾಡ್ಗಿಚ್ಚು, ನಂದಿಸಲು ಹರಸಾಹಸ

Forest Fire

Forest fire breaks out at Mullayanagiri mountain range in Chikkamagaluru

ಚಿಕ್ಕಮಗಳೂರು: ರಾಜ್ಯಾದ್ಯಂತ ದಿನೇದಿನೆ ಬಿಸಿಲಿನ ತೀವ್ರತೆ ಜಾಸ್ತಿಯಾಗುತ್ತಿದೆ. ಮಾರ್ಚ್‌ ತಿಂಗಳಿಗೂ ಮೊದಲೇ ಬೇಸಿಗೆಯ (Summer Season) ಅನುಭವವಾಗುತ್ತಿದೆ. ಚಳಿ ಮಾಯವಾಗಿ ತಾಪಮಾನ ಜಾಸ್ತಿಯಾಗುತ್ತಿದೆ. ಇದರ ಬೆನ್ನಲ್ಲೇ, ಚಿಕ್ಕಮಗಳೂರು (Chikkamagalur) ತಾಲೂಕಿನ ಮುಳ್ಳಯ್ಯನಗಿರಿ ಬೆಟ್ಟದಲ್ಲಿ (Mullayanagiri Mountain) ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು (Forest Fire) ಹೊತ್ತಿಕೊಂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿಯನ್ನು ನಂದಿಸುವುದು ಬಿಡಿ, ಕಾಡ್ಗಿಚ್ಚಿನ ಸಮೀಪವೂ ಹೋಗಲು ಆಗುತ್ತಿಲ್ಲ. ಹಾಗಾಗಿ, ಕಾಡ್ಗಿಚ್ಚು ಯಾವ ಅನಾಹುತಕ್ಕೆ ಕಾರಣವಾಗುತ್ತದೆಯೋ ಎಂಬ ಆತಂಕ ಸುತ್ತಮುತ್ತಲಿನ ಜನರು ಹಾಗೂ ಅಧಿಕಾರಿಗಳನ್ನು ಕಾಡುತ್ತಿದೆ. ಚಿಕ್ಕಮಗಳೂರು ತಾಲೂಕಿನ ಭೈರೇಗುಡ್ಡ ಅರಣ್ಯದಲ್ಲಿ ರಾತ್ರೋರಾತ್ರಿ ಕಾಡ್ಗಿಚ್ಚು ಹೊತ್ತಿಕೊಂಡಿದೆ.

ಅತ್ಯಂತ ಎತ್ತರ ಹಾಗೂ ಇಳಿಜಾರು ಪ್ರದೇಶದ ಗುಡ್ಡವಾದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಗ್ನಿ ನಂದಿಸಲು ಆಗುತ್ತಿಲ್ಲ. ಈಗಾಗಲೇ ಭೈರೇಗುಡ್ಡದಿಂದ ಕವಿಕಲ್‌ ಗಂಡಿ ಅರಣ್ಯದವರೆಗೂ ಅಗ್ನಿಯ ಕೆನ್ನಾಲಗೆ ಚಾಚಿದೆ. ಭಾರಿ ಗಾಳಿಯೂ ಇರುವುದರಿಂದ ಬೆಂಕಿ ಇನ್ನಷ್ಟು ವ್ಯಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Fire Accident: ಕಾಡ್ಗಿಚ್ಚು ನಂದಿಸಲು ಹೋದ ನಾಲ್ವರು ಸಿಬ್ಬಂದಿಗೆ ತಗುಲಿದ ಬೆಂಕಿ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ಬೇಸಿಗೆಯ ವೇಳೆ ಬಂಡೀಪುರ ಅರಣ್ಯ ಪ್ರದೇಶ, ಮುಳ್ಳಯ್ಯನಗಿರಿ ಗುಡ್ಡಗಾಡು ಪ್ರದೇಶ ಸೇರಿ ರಾಜ್ಯದ ಹಲವೆಡೆ ಕಾಡ್ಗಿಚ್ಚು, ಅಗ್ನಿ ದುರಂತಗಳು ಸಂಭವಿಸುತ್ತವೆ. ಆದರೆ, ಬೇಸಿಗೆ ಆರಂಭಕ್ಕೂ ಮೊದಲೇ ಕಾಡ್ಗಿಚ್ಚು ಆವರಿಸಿರುವುದು ಭೀತಿ ಹೆಚ್ಚಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version