Site icon Vistara News

Forest officer suicide : ನಿವೃತ್ತ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ, ನಿದ್ರಾಹೀನತೆ ಕಾರಣ?

Forest officer suicide

#image_title

ಮಡಿಕೇರಿ: ಕೊಡಗಿನ‌ ವಿವಿಧೆಡೆ ರೇಂಜರ್ ಆಗಿ ಸೇವೆ ಸಲ್ಲಿಸಿದ್ದ, ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Forest officer suicide) ಮಾಡಿಕೊಂಡಿದ್ದಾರೆ. ಈಗ ೮೦ನೇ ವಯಸ್ಸಿನವರಾಗಿರುವ ಟಿ.ವಿ. ಶಶಿ ಎಂಬವರೇ ಹೀಗೆ ಸಾವಿಗೆ ಶರಣಾದವರು.

ಕುಶಾಲನಗರ ತಾಲ್ಲೂಕಿನ ಬಸವನತ್ತೂರಿನಲ್ಲಿ ಘಟನೆ ನಡೆದಿದೆ. ಅವರು ತಮ್ಮ ಮನೆಯಲ್ಲೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಶಶಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರಿಗೆ ಪ್ರಮುಖವಾಗಿ ನಿದ್ರಾ ಹೀನತೆ ಕಾಡುತ್ತಿತ್ತು. ತಮ್ಮ ಸಮಸ್ಯೆಗಳನ್ನು ಅವರು ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ: ಅಪರಿಚಿತ‌ ವಾಹನ ಡಿಕ್ಕಿ,‌ ರಸ್ತೆ ದಾಟುತಿದ್ದ‌ ವ್ಯಕ್ತಿ ಸ್ಥಳದಲ್ಲೇ ಸಾವು

ಧಾರವಾಡ: ತಾಲೂಕಿನ ಗರಗ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ವಾಹನ ಡಿಕ್ಕಿಯ ರಭಸಕ್ಕೆ ಅವರ ಎರಡೂ ಕಾಲುಗಳು ತುಂಡಾಗಿ ಬಿದ್ದಿವೆ. ಸಾವನ್ನಪ್ಪಿದ ವ್ಯಕ್ತಿ ಬಗ್ಗೆ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಗರಗ‌ ಠಾಣೆ ಪೊಲೀಸರು ಭೇಟಿ ಮಾಡಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : Road accident : ಬೈಕ್‌ಗಳ ಮುಖಾಮುಖಿ ಡಿಕ್ಕಿ; ಒಂದು ಬೆಂಕಿಗಾಹುತಿ, ವಿದೇಶಿ ಸವಾರನ ಮೇಲೆ ಸ್ಥಳೀಯರ ಹಲ್ಲೆ

Exit mobile version