Site icon Vistara News

Forest smuggling | ಸಾಗವಾನಿ ಅಕ್ರಮ ಸಾಗಾಟ; ಮಾಲು ಸಮೇತ ಏಳು ಆರೋಪಿಗಳ ಸೆರೆ

honnavara teakwood

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಅರಣ್ಯ ವಲಯ ವ್ಯಾಪ್ತಿಯ ಹಡಿಕಲ್ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನಾಗಿ (Forest smuggling) ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊನ್ನಾವರ ವಿಭಾಗ, ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ನಾಟಾ ಸಾಗಾಟ ನಡೆದಿದ್ದು, ಆರೋಪಿಗಳಾದ ಹಡಿಕಲ್ ನಿವಾಸಿ ನಾಗರಾಜ ನಾಯ್ಕ, ಚಿತ್ತಾರದ ಸಂದೀಪ ನಾಯ್ಕ, ಕೆಳಗಿನ ಇಡಗುಂಜಿಯ ಗಂಗಾಧರ ಆಚಾರಿ, ನೇಸಲ್‌ನೀರ್ ಸಂದೀಪ ನಾಯ್ಕ, ಗೌರೀಶ ನಾಯ್ಕ, ಪ್ರವೀಣ ನಾಯ್ಕ ಮತ್ತು ಅಡಿಕೆಕುಳಿ ಪ್ರಕಾಶ ಗೌಡ ಎನ್ನುವವರನ್ನು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಕೆಳಗಿನ ಇಡಗುಂಜಿಯ ರಥ ಶಿಲ್ಪಿ ಗಂಗಾಧರ ಆಚಾರಿ ಇವರ ಕಟ್ಟಿಗೆ ಗೋಡೌನ್‌ನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗವಾನಿ ತುಂಡುಗಳನ್ನು ಜಪ್ತಿ ಮಾಡಲಾಗಿತ್ತು. ಈ ಪ್ರಕರಣದಲ್ಲಿಯೂ ಸಹ ಇವರ ಗೋಡೌನ್‌ನಲ್ಲಿ ಅಕ್ರಮ ತುಂಡುಗಳು ಕಂಡು ಬಂದಿದ್ದವು. ಅವುಗಳನ್ನೂ ಜಪ್ತಿ ಮಾಡಲಾಗಿತ್ತು.

ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ.ಬೋರಯ್ಯ, ಆರ್‌ಎಫ್‌ಓ ಸವಿತಾ ಆರ್.ದೇವಾಡಿಗ, ಡಿಆರ್‌ಎಫ್‌ಒ ಶಿವಾನಂದ ಇಂಚಲ, ಯೋಗೇಶ ಮೊಗೇರ, ಮಹಾದೇವ ಮಡ್ಡಿ, ಸಂದೀಪ ಎಸ್.ಅರ್ಕಸಾಲಿ, ಮಂಜುನಾಥ ನಾಯ್ಕ, ಜಿ. ಸಂತೋಷ, ಷಣ್ಮುಖ ಹವಳಗಿ, ಲೋಹಿತ್ ನಾಯ್ಕ, ರೇಷ್ಮಾ ಜಿ.ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ, ವಿನಾಯಕ ನಾಯ್ಕ ಇದ್ದರು.

ಇದನ್ನೂ ಓದಿ | Road Accident | ಅರಬೈಲ್‌ ಘಟ್ಟದಲ್ಲಿ ಟ್ಯಾಂಕರ್‌ಗೆ ಸ್ಕೂಲ್‌ ಬಸ್‌ ಡಿಕ್ಕಿ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

Exit mobile version